Advertisement

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

10:18 PM May 14, 2024 | Team Udayavani |

ಬೆಂಗಳೂರು: ಡಿಪ್ಲೋಮಾದ ಎಂಟು ಹೊಸ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಕೋರ್ಸ್‌ನ ಲ್ಯಾಟರಲ್‌ ಎಂಟ್ರಿಗೆ ಅವಕಾಶ ನೀಡಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

Advertisement

ಅದರಂತೆ ಗೇಮಿಂಗ್‌ ಮತ್ತು ಅನಿಮೇಷನ್‌, ಕ್ಲೌಡ್ ಕಂಪ್ಯೂಟಿಂಗ್‌ ಮುಂತಾದ ಡಿಪ್ಲೋಮಾ ಕೋರ್ಸ್‌ಗಳನ್ನು ಡಿಜಿಸಿಇಟಿ-2024 ಪರೀಕ್ಷೆಗೆ ಸೇರ್ಪಡೆ ಮಾಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಸೂಚನೆ ನೀಡಿದೆ.

2021-22ರ ಸಾಲಿನಲ್ಲಿ ಆರಂಭಗೊಂಡಿರುವ ಈ ಹೊಸ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆದು ಮೂರು ವರ್ಷಗಳ ಡಿಪ್ಲೋಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು 2024-25ನೇ ಸಾಲಿನಿಂದ ಲ್ಯಾಟರಲ್‌ ಎಂಟ್ರಿ ಮೂಲಕ ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.

ಸೈಬರ್‌ ಫಿಸಿಕಲ್‌ ಸಿಸ್ಟಂ ಆ್ಯಂಡ್‌ ಸೆಕ್ಯುರಿಟಿ, ಫ‌ುಡ್‌ ಪ್ರೊಸೆಸಿಂಗ್‌ ಮತ್ತು ಪ್ರಿಸರ್ವೆಶನ್‌, ಅಟೋಮೇಷನ್‌ ಮತ್ತು ರೋಬೋಟಿಕ್ಸ್‌, ಗೇಮಿಂಗ್‌ ಮತ್ತು ಅನಿಮೇಷನ್‌, ಕ್ಲೌಡ್ ಕಂಪ್ಯೂಟಿಂಗ್‌ ಮತ್ತು ಬಿಗ್‌ ಡೇಟಾ, ಟ್ರಾವೆಲ್‌ ಮತ್ತು ಟೂರಿಸಂ, ಅಲ್ಟರ್ನೆಟ್‌ ಎನರ್ಜಿ ಟೆಕ್ನಾಲಜಿ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮತ್ತು ಎಲೆಕ್ಟ್ರಿಕಲ್‌ ವೆಹಿಕಲ್‌ ಟೆಕ್ನಾಲಜಿನಲ್ಲಿ ಮೂರು ವರ್ಷ ಡಿಪ್ಲೊಮಾ ಓದಿರುವವರು ಲ್ಯಾಟರಲ್‌ ಎಂಟ್ರಿ ಮೂಲಕ ಆಯಾ ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್‌ ಓದಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next