ಹೊಸದಿಲ್ಲಿ: ಛತ್ತೀಸ್‌ಘಡದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮಂಗಳವಾರ ಅಟ್ಟಹಾಸಗೈದಿದ್ದು ಕೂಂಬಿಂಗ್‌ಗೆ ತೆರಳುತ್ತಿದ್ದ ಸಿಆರ್‌ಪಿಎಫ್ ವಾಹನವನ್ನೆ ಸ್ಫೋಟಕವಿಟ್ಟು ಉಡಾಯಿಸಿದ್ದು 9 ಮಂದಿ ಯೋಧರು ಹುತಾತ್ಮರಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಯೋಧರನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕಿಸ್ತಾರಾಮ್ ಪ್ರಾಂತ್ಯದಲ್ಲಿ ಯೋಧರು ಕೂಂಬಿಂಗ್‌ಗೆ ತೆರಳುತ್ತಿದ್ದ ವೇಳೆ ನಕ್ಸಲರು ಹೊಂಚು ಹಾಕಿ ಐಇಡಿ ಸ್ಫೋಟಿಸಿ ದುಷ್ಕೃತ್ಯ ಮೆರೆದಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದ್ದು ಕೂಂಬಿಂಗ್ ಬಿರುಸುಗೊಳಿಸಲಾಗಿದೆ.
10 ದಿನಗಳ ಹಿಂದಷ್ಟೇ ಸಿಆರ್‌ಪಿಎಫ್ ಯೋಧರು ಕೂಂಬಿಂಗ್‌ನಲ್ಲಿ 10 ಮಂದಿ ನಕ್ಸಲರನ್ನು ಹತ್ಯೆಗೈದಿದ್ದರು. ಆ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ 2 ವರ್ಷಗಳಲ್ಲಿ 300 ಮಂದಿ ನಕ್ಸಲರನ್ನು ಛತ್ತೀಸ್‌ಘಡದಲ್ಲಿ ಹತ್ಯೆಗೈಯಲಾಗಿದೆ.