ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ಮರಣಮೃದಂಗ ಮುಂದುವರಿದಿದ್ದು, ಆಕ್ಸಿಜನ್ ಕೊರತೆಯಿಂದಾಗಿ ವೈದ್ಯರೊಬ್ಬರು ಸೇರಿದಂತೆ ಎಂಟು ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ಘಟನೆ ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ(ಮೇ 01) ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅನಾರೋಗ್ಯದಿಂದ ಮಹಿಳೆ ಸಾವು : ಜೆಸಿಬಿ ಯಂತ್ರದಲ್ಲೇ ಮೃತದೇಹ ಸಾಗಣೆ
“ನಾವು ಇನ್ನೂ ಐದು ಮಂದಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಡಾ.ಎಸ್ ಸಿಎಲ್ ಗುಪ್ತಾ ಅವರು ತಿಳಿಸಿರುವುದಾಗಿ ಪಿಟಿಐ ನ್ಯೂಸ್ ವರದಿ ಮಾಡಿದೆ.
ಇಂದು ಸಾವನ್ನಪ್ಪಿರುವ ಎಂಟು ಮಂದಿಯಲ್ಲಿ ಒಬ್ಬರು ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೋ ಡಿಪಾರ್ಟ್ ಮೆಂಟ್ ನ ವೈದ್ಯರೊಬ್ಬರು ಸೇರಿರುವುದಾಗಿ ಡಾ.ಆರ್ ಕೆ ಹಿಮ್ಥಾನಿ ತಿಳಿಸಿದ್ದಾರೆ.
ಕೋವಿಡ್ 19 ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಆಸ್ಪತ್ರೆಗಳು ಆಮ್ಲಜನಕದ ಕೊರತೆಯ ಬಗ್ಗೆ ತಮ್ಮ ಅನುಭವಗಳಿಂದ ಕಲಿತುಕೊಳ್ಳಬೇಕು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಜೀವ ಉಳಿಸುವ ಅನಿಲ ಉತ್ಪಾದಿಸುವ ಪ್ಲ್ಯಾಂಟ್ ಗಳನ್ನು ಸ್ಥಾಪಿಸಬೇಕು ಎಂದು ದೆಹಲಿ ಹೈಕೋರ್ಟ್ ತಿಳಿಸಿತ್ತು.
ಆಕ್ಸಿಜನ್ ತುರ್ತು ಅಗತ್ಯವಾಗಿದೆ. ಆದರೆ ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಇಲ್ಲದಿರುವುದು ಬೇಜವಾಬ್ದಾರಿಯಾಗಿದೆ ಎಂದು ದೆಹಲಿ ಹೈಕೋರ್ಟ್ ಹಿಂದಿನ ವಿಚಾರಣೆ ವೇಳೆ ಚಾಟಿ ಬೀಸಿತ್ತು. ನಿಮ್ಮ ಹಿಂದಿನ ಅನುಭವಗಳು ಆಸ್ಪತ್ರೆಗಳಿಗೆ ಪಾಠವಾಗಬೇಕು. ಅದಕ್ಕಾಗಿ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪಿಸಬೇಕು ಎಂದು ಎಂದು
ಆಕ್ಸಿಜನ್ ಕೊರತೆ ಸಂಬಂಧ ದಾಖಲಾದ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಈ ಅಭಿಪ್ರಾಯವ್ಯಕ್ತಪಡಿಸಿತ್ತು.