Advertisement
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವಲಗುಂದ ತಾಲೂಕಿನ ಮೊರಬ ಗ್ರಾಮದ 83 ವರ್ಷದ (ಪಿ-10375) ಹಾಗೂ ಮಂಗಳವಾರ ದಿನವೇ ಸೋಂಕು ಧೃಡಪಟ್ಟ 69 ವರ್ಷದ (ಪಿ-14535) ಸೇರಿ ವೃದ್ದರಿಬ್ಬರು ಮೃತಪಟ್ಟಿದ್ದಾರೆ.
Related Articles
Advertisement
ಉತ್ತರ ಕನ್ನಡದ ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯ 55 ವರ್ಷದ ಪುರುಷ (ಪಿ-14523), 30 ವರ್ಷದ ಮಹಿಳೆ (ಪಿ-14524), 65 ವರ್ಷದ ಮಹಿಳೆ (ಪಿ-14530) ಹಾಗೂ ಕಲಬುರ್ಗಿಯ ಅಂತರ ಜಿಲ್ಲಾ ಪ್ರಯಾಣದ ಹಿನ್ನಲೆಯ 47 ವರ್ಷದ ಪುರುಷ (ಪಿ-14529), ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ 31 ವರ್ಷದ ಪುರುಷ (ಪಿ-14526), 36 ವರ್ಷದ ಪುರುಷ (ಪಿ-14527), 38 ವರ್ಷದ ಪುರುಷ (ಪಿ-14528) ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿಯಾದ ಪಿ-12137 ಸಂಪರ್ಕದಿAದ 70 ವರ್ಷದ ವೃದ್ದರೊಬ್ಬರಲ್ಲಿ (ಪಿ-14531) ಸೋಂಕು ಧೃಡಪಟ್ಟಿದೆ.
5 ಸೋಂಕಿತರು ಗುಣಮುಖ: ಕೊವೀಡ್ ಸೋಂಕಿತರಾದ ಹುಬ್ಬಳ್ಳಿಯ ಆದರ್ಶ ನಗರದ ನಿವಾಸಿಯಾದ 27 ವರ್ಷದ ಮಹಿಳೆ (ಪಿ-8744), ನವಲಗುಂದ ತಾಲೂಕಿನ ಮೊರಬ ಗ್ರಾಮದ 71 ವರ್ಷದ ವೃದ್ದ ಮಹಿಳೆ (ಪಿ-9158), 43 ವರ್ಷದ ಪುರುಷ (ಪಿ-9159), 30 ವರ್ಷದ ಪುರುಷ (ಪಿ-9160) ಹಾಗೂ ಧಾರವಾಡದ ವಿಜಯನಗರ ಮಾವಿನ ತೋಪಿನ ಹತ್ತಿರದ ನಿವಾಸಿಯಾದ 35 ವರ್ಷದ ಮಹಿಳೆ (ಪಿ-9161) ಗುಣಮುಖರಾಗಿ ಕಿಮ್ಸನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಾಣಂತಿಯಿಂದ ನವಜಾತ ಮಗುವಿಗೂ ಸೋಂಕುಕೋವಿಡ್ 19 ಸೋಂಕಿತ ಮಹಿಳೆಯಾದ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ 25 ವರ್ಷದ ಗರ್ಭಿಣಿಗೆ (ಪಿ-10800) ಜೂ.28 ರಂದು ಶಸ್ತ್ರಚಿಕಿತ್ಸೆ ಮೂಲಕ ಕಿಮ್ಸನ ವೈದ್ಯರು ಹೆರಿಗೆ ಮಾಡಿಸಿದ್ದರು. ಈ ಮಹಿಳೆಯಿಂದ ಜನಿಸಿರುವ 2-3 ದಿನದ ನವಜಾತ ಹೆಣ್ಣು ಹಸಿಗೂಸಿಗೆ (ಪಿ-14522) ಸಹ ಈಗ ತಾಯಿಯ ಸಂಪರ್ಕದಿಂದ ಕೋವಿಡ್ 19 ಸೋಂಕು ತಾಗಿದೆ. ಇದರ ಜೊತೆಗೆ 30 ವರ್ಷದ ಪುರುಷ (ಪಿ-14533) ವ್ಯಕ್ತಿಗೂ ಸೋಂಕು ಧೃಡಪಟ್ಟಿದೆ. ಇದಲ್ಲದೇ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್‌ಐ) ಬಳಲುತ್ತಿದ್ದ 9 ತಿಂಗಳ ಗಂಡು ಮಗುವಿನಲ್ಲೂ (ಪಿ-14525) ಕೋವಿಡ್ 19 ಸೋಂಕು ಧೃಡಪಟ್ಟಿದೆ.