ಸಿಡ್ನಿ: ವಿಶ್ವದ್ಯಾಂತ ಕೋವಿಡ್-19 ಸೋಂಕು ದಿನೇ ದಿನೇ ಹಬ್ಬುತ್ತಿದೆ. ಬಹುತೇಕ ವಿಶ್ವವೇ ಲಾಕ್ ಡೌನ್ ಪರಿಸ್ಥಿತಿಯಲ್ಲಿದೆ. ಭಾರತವೂ 21 ದಿನಗಳ ಸಂಪೂರ್ಣ ಲಾಕ್ ಡೌನ್ ನಲ್ಲಿದೆ. ಜನರು ಗುಂಪುಗೂಡುವುದನ್ನು, ಒಂದೆಡೆ ಹೆಚ್ಚು ಜನರು ನಿಷೇಧಿಸಲಾಗಿದೆ. ಇದುವರೆಗೆ ಔಷಧಿ ಕಂಡುಹಿಡಿಯದ ಈ ಸೋಂಕು ಬರದಿರುವಂತೆ ಕ್ರಮ ಕೂಗೊಳ್ಳುವುದೇ ಇದಕ್ಕೆ ಔಷಧಿ. ಅದಕ್ಕೆ ಸಾಮಾಜಿಕ ಅಂತರವೇ ಮದ್ದು. ಈ ಕಾರಣದಿಂದ ಭಾರತದಲ್ಲಿ ಸಭೆ ಸಮಾರಂಭಗಳು, ಜಾತ್ರೆಗಳು, ಮದುವೆಗಳು ರದ್ದಾಗಿದೆ. ಇದೇ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿದೆ.
ಆಸ್ಟ್ರೇಲಿಯಾದಲ್ಲೂ ಕೊವಿಡ್-19 ವೈರಸ್ ಕಾಟ ಜೋರಾಗಿದೆ. ಈ ಕಾರಣದಿಂದ ಆಸ್ಟ್ರೇಲಿಯಾದ ಎಂಟು ಕ್ರಿಕೆಟಿಗರ ಮದುವೆ ಕಾರ್ಯಕ್ರ,ಮ ಮುಂದೂಡಿಕೆಯಾಗಿದೆ.
ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಂ ಜಂಪಾ, ವೇಗಿ ಜಾಕ್ಸನ್ ಬರ್ಡ್, ಆರಂಭಿಕ ಆಟಗಾರ ಡಾರ್ಸಿ ಡಿ ಶಾರ್ಟ್, ದೇಶಿ ಆಟಗಾರರಾದ ಮಿಚೆಲ್ ಸ್ವೆಪ್ಸನ್, ಅಲಿಸ್ಟರ್ ಮೆಕ್ ಡೆರ್ಮಾಟ್, ಆಂಡ್ರೂ ಟೈ, ಹೆಸ್ ಜಾನ್ಸನ್ ಮತ್ತು ಕ್ಯಾಟಲಿನ್ ಫ್ರೈಟ್ ರ ವಿವಾಹ ಕಾರ್ಯಕ್ರಮ ಸೋಂಕಿನ ಕಾರಣದಿಂದ ಮುಂದೂಡಿಕೆಯಾಗಿದೆ.
ಇದರೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಲಿಜೆಲಿ ಲೀ ಮದುವೆಯೂ ಮುಂದೂಡಿಕೆಯಾಗಿದೆ ಎನ್ನಲಾಗಿದೆ. ಇವರಿಬ್ಬರ ಮದುವೆ ಎಪ್ರಿಲ್ 10ರಂದು ನಿಗದಿಯಾಗಿತ್ತು.
ಆಸೀಸ್ ನ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಕೂಡಾ ಇತ್ತೀಚೆಗೆ ಭಾರತೀಯ ಮೂಲದ ರೂಪದರ್ಶಿ ವಿನಿ ರಾಮನ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಆಸ್ಟ್ರೇಲಿಯಾದಲ್ಲಿ ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. 34 ಜನರು ಸಾವನ್ನಪ್ಪಿದ್ದಾರೆ.