Advertisement
ಆದರೆ, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಮಹಿಳಾ ಸ್ಪರ್ಧಿಗಳ ಹೆಸರು ಘೋಷಣೆಯಾಗಿರುವುದು ಇದೇ ಬಾರಿ ಎಂಬುದು ಸಮಾಧಾನಕರ ಸಂಗತಿ.
ಮಹಿಳಾ ಪ್ರಾತಿನಿಧ್ಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ 224 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿಯಿಂದ 12, ಕಾಂಗ್ರೆಸಿನಿಂದ 11, ಜೆಡಿಎಸ್‌ನಿಂದ 9 ಹಾಗೂ ಪಕ್ಷೇತರರು 184 ಮಂದಿ ಸ್ಪರ್ಧಿಸಿದ್ದರು. ಈ ವೇಳೆ 2.64 ಕೋಟಿ ಮಹಿಳಾ ಮತದಾರರಿದ್ದರು. ಅವರೆಲ್ಲರ ಪ್ರತಿನಿಧಿಗಳಾಗಿ ಸ್ಪರ್ಧಿಸಿದ್ದ 216 ಮಹಿಳಾ ಅಭ್ಯರ್ಥಿಗಳ ಪೈಕಿ 10 ಮಂದಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ. ಅಂದರೆ, ಸ್ಪರ್ಧಿಸಿದ್ದ ಶೇ.96.42 ರಷ್ಟು ಮಹಿಳಾ ಪ್ರತಿನಿಧಿಗಳ ಪೈಕಿ ಗೆದ್ದವರು ಶೇ.4.46 ಮಾತ್ರ.
Related Articles
Advertisement
17ರಲ್ಲಿ 3 ಕ್ಷೇತ್ರಕ್ಕೆ ಪ್ರಮೀಳಾ ಪ್ರಾತಿನಿಧ್ಯಉಡುಪಿ -ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಕೋಲಾರ, ಹಾಸನ, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ಬಾಗಲಕೋಟೆ, ದಕ್ಷಿಣ ಕನ್ನಡ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ, ರಾಯಚೂರು, ಮೈಸೂರು ಸಹಿತ 17 ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಈ ಪೈಕಿ ಉಡುಪಿ-ಚಿಕ್ಕಮಗಳೂರಿನಲ್ಲಿ ಈ ಹಿಂದೆ ಸ್ಪರ್ಧಿಸಿದ್ದ ಮಹಿಳಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಸ್ಥಳಾಂತರಗೊಂಡಿದ್ದಾರೆ. ದಾವಣಗೆರೆೆಯಲ್ಲಿ ಬಿಜೆಪಿ (ಗಾಯತ್ರಿ ಸಿದ್ದೇಶ್ವರ) ಮತ್ತು ಕಾಂಗ್ರೆಸ್ (ಪ್ರಭಾ ಮಲ್ಲಿಕಾರ್ಜುನ) ಮಹಿಳಾ ಸ್ಪರ್ಧಿಗಳನ್ನೇ ಕಣಕ್ಕಿಳಿಸಲಿದೆ. ಅಂತೆಯೇ ಶಿವಮೊಗ್ಗ (ಗೀತಾ ಶಿವರಾಜಕುಮಾರ್) ಹಾಗೂ ಬಾಗಲಕೋಟೆ (ಸಂಯುಕ್ತಾ ಪಾಟೀಲ್) ಸೇರಿ ಮೂರು ಕ್ಷೇತ್ರದಲ್ಲಿ ಪ್ರಮೀಳೆಯರಿಗೆ ಪ್ರಾತಿನಿಧ್ಯ ಸಿಕ್ಕಂತಾಗಿದೆ. ಕೈ-ಕಮಲದ ಮಹಿಳಾ ಅಭ್ಯರ್ಥಿಗಳು
ಕಾಂಗ್ರೆಸ್ ಪಕ್ಷವು ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್, ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್, ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ ಅವರನ್ನು ಕಣಕ್ಕಿಳಿಸುತ್ತಿದ್ದರೆ, ಬಿಜೆಪಿಯು ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಹಾಗೂ ದಾವಣಗೆರೆಯಿಂದ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಟ್ಟಿದೆ. -ಸಾಮಗ ಶೇಷಾದ್ರಿ