Advertisement

ಶಿರಸಿ ಅರ್ಬನ್‌ ಬ್ಯಾಂಕ್‌ಗೆ 8.54 ಕೋಟಿ ರೂ. ಲಾಭ

04:44 PM Aug 01, 2022 | Team Udayavani |

ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ ಶಿರಸಿ ಅರ್ಬನ್‌ ಸಹಕಾರಿ ಬ್ಯಾಂಕ್‌ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ನಗರದ ರಾಯರಪೇಟೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಬ್ಯಾಂಕಿನ ಪ್ರಗತಿ ಕುರಿತು ಸ್ಥೂಲ ಚಿತ್ರಣ ನೀಡಿದರು.

Advertisement

ಬ್ಯಾಂಕು ತನ್ನ ಒಟ್ಟೂ ವ್ಯವಹಾರವನ್ನು 1692.35 ಕೋಟಿಗೆ ದಾಖಲಿಸಿರುವುದನ್ನು ಶ್ಲಾಘಿಸಿದರು. ಬ್ಯಾಂಕಿನ ಸಂಸ್ಥಾಪಕ ದಿವಂಗತ ರಾವ್‌ ಬಹಾದ್ದೂರ್‌ ಪುಂಡಲೀಕರಾವ್‌ ನಾರಾಯಣ ಪಂಡಿತರ ಪ್ರತಿಮೆಯನ್ನು ಕೇಂದ್ರ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಹಾಗೂ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಲಾಯಿತು.

ಬ್ಯಾಂಕ್‌ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟೂ ಠೇವಣಿಯನ್ನು 1064.27 ಕೋಟಿಗಳಿಗೆ, ದುಡಿಯುವ ಬಂಡವಾಳವನ್ನು 1231.86 ಕೋಟಿ ರೂ.ಗಳಿಗೆ ಹೆಚ್ಚಿಸುವುದರೊಂದಿಗೆ 8.54 ಕೋಟಿ ನಿವ್ವಳ ಲಾಭವನ್ನು ದಾಖಲಿಸಿ ಪ್ರಗತಿಯ ನಾಗಾಲೋಟವನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಹೇಳಿದರು.

ಬ್ಯಾಂಕಿನ ಸದಸ್ಯರ ಸಂಖ್ಯೆ 45,314 ದಾಟಿದ್ದು, ಸಂದಾಯಿತ ಶೇರು ಬಂಡವಾಳ 25.71 ಕೋಟಿ ರೂ. ತಲುಪಿದೆ. ಕಳೆದ ವರ್ಷದ 85.83 ಕೋಟಿ ರೂ. ಆದಾಯವನ್ನು 90.99 ಕೋಟಿಗಳಿಗೆ ಬ್ಯಾಂಕು ಹೆಚ್ಚಿಸಿರುತ್ತದೆ. ಈ ಆರ್ಥಿಕ ವರ್ಷದಲ್ಲಿಯೂ ಕೂಡ ಬ್ಯಾಂಕಿನ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣವು ಸೊನ್ನೆ ಪ್ರತಿಶತ ಇರುವುದಾಗಿ ತಿಳಿಸಿದರು.

1000 ಕೋಟಿಗಿಂತಲೂ ಹೆಚ್ಚಿನ ದುಡಿಯುವ ಬಂಡವಾಳವನ್ನು ಹೊಂದಿ ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಅಗ್ರ ಹತ್ತರಲ್ಲಿ ಒಂದು ಸ್ಥಾನವನ್ನು ಪ್ರಸಕ್ತ ಸಾಲಿನಲ್ಲಿಯೂ ಭದ್ರಪಡಿಸಿಕೊಂಡು ಬಂದಿರುವುದನ್ನು ಸದಸ್ಯರು ಶ್ಲಾಘಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟರ್‌ ಬ್ಯಾಂಕಿನ ಪ್ರಗತಿಯ ಚಿತ್ರಣ ನೀಡಿದರು. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ಯುಪಿಐ ಸೇವೆಯನ್ನು ಗ್ರಾಹಕರ ಅನುಕೂಲಕ್ಕಾಗಿ ಪರಿಚಯಿಸಲಾಗಿದೆ ಎಂದರು.

Advertisement

ಉತ್ಕೃಷ್ಟ ಸಾಧನೆ ಮಾಡಿದ ಬ್ಯಾಂಕಿನ ಯಲ್ಲಾಪುರ ಹಾಗೂ ಬಬ್ರುವಾಡ (ಅಂಕೋಲಾ) ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗೆ ಅಭಿನಂದಿಸಿ ಪ್ರಶಸ್ತಿ ಪತ್ರ ನೀಡಲಾಯಿತು. ಅದೇ ರೀತಿ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ನಿವತ್ತಿ ಹೊಂದಿದ ಸಂತೋಷ ಪ್ರಭಾಕರ ಪಾಯದೆ ಹಾಗೂ ಬಾಲಚಂದ್ರ ಗೋವಿಂದ ಕುವಳೇಕರರನ್ನು ಹಾಗೂ ಹಿರಿಯ ಸದಸ್ಯರನ್ನು ಆಡಳಿತ ಮಂಡಳಿ ಸದಸ್ಯರು ಬ್ಯಾಂಕಿನ ಹಾಗೂ ಶೇರುದಾರ ಸದಸ್ಯರ ಪರವಾಗಿ ಸನ್ಮಾನಿಸಿದರು.

ಕಾಶೀನಾಥ ಗೋವಿಂದ ಮೂಡಿ, ಉದಯ ನಾಗೇಶರಾವ್‌ ನಿಲೇಕಣಿ, ಸುಧಾಕರ ವೈಕುಂಠರಾವ್‌ ಕಾಮತ್‌, ವಿಷ್ಣುದಾಸ ಅನಂತ ಕಾಸರಕೋಡ, ಮೋಹನ ರಾಮಚಂದ್ರ ಹುಲೇಕಲ್‌, ದಿನಕರ ಜನಾರ್ಧನ ನಾಯಕ, ರಾಜೇಂದ್ರ ಅನಂತ ಕಾಮತ ಕಿಮಾನೇಕರ ಹಾಗೂ ಶ್ರೀಪತಿ ರಾಮಾ ಭಾಗÌತರ ಕುರಿತು ಬ್ಯಾಂಕಿನ ನಿರ್ದೇಶಕ ಪ್ರೊ| ಕೆ.ಎನ್‌. ಹೊಸಮನಿ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next