Advertisement
ಮುಹಮ್ಮದ್ ಅನಾಸ್, ವಿ.ಕೆ. ವಿಸ್ಮಯಾ, ಜಿಸ್ನಾ ಮ್ಯಾಥ್ಯೂ ಮತ್ತು ಟಾಮ್ ನಿರ್ಮಲ್ ನೋಹ್ ಅವರನ್ನೊಳಗೊಂಡ ಭಾರತ ತಂಡ 3 ನಿಮಿಷ, 15.77 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು. ಫೈನಲ್‌ನಲ್ಲಿ ವಿಶ್ವದ 8 ತಂಡಗಳು ಭಾಗವಹಿಸಿದ್ದವು. ಬ್ರಝಿಲ್‌ಗಿಂತ ಮೇಲಿನ ಸ್ಥಾನ ಭಾರತದ್ದಾಯಿತು.
ದೋಹಾ ಫೈನಲ್‌ನಲ್ಲಿ ಅಮೆರಿಕ 3 ನಿಮಿಷ, 09.34 ಸೆಕೆಂಡ್ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದಿತು. ಜಮೈಕಾ ಬೆಳ್ಳಿ (3:11.78), ಬಹ್ರೈನ್ ಕಂಚಿನ ಪದಕ ಜಯಿಸಿತು (3:11.82). ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಿಶ್ರ ರಿಲೇ ಸ್ಪರ್ಧೆಯನ್ನು ಅಳವಡಿಸಲಾಗಿತ್ತು.
Related Articles
Advertisement
ಬೋಲ್ಟ್ ದಾಖಲೆ ಮುರಿದ ಅಲಿಸನ್ ಫೆಲಿಕ್ಸ್ವಿಶ್ವ ಆ್ಯತ್ಲೆಟಿಕ್ ಚಾಂಪಿ ಯನ್‌ಶಿಪ್‌ನಲ್ಲಿ ಅತೀ ಹೆಚ್ಚು ಚಿನ್ನ ಗೆದ್ದ ದಾಖಲೆಯೀಗ ಅಮೆರಿಕದ ಓಟಗಾರ್ತಿ ಅಲಿಸನ್ ಫೆಲಿಕ್ಸ್ ಪಾಲಾಗಿದೆ. ವಿಶ್ವಶ್ರೇಷ್ಠ ಓಟಗಾರ ಉಸೇನ್ ಬೋಲ್ಟ… ದಾಖಲೆ ಪತನಗೊಂಡಿದೆ. ರವಿವಾರ ರಾತ್ರಿ ನಡೆದ ಮಿಶ್ರ ವಿಭಾಗದ 4ಗಿ400 ರಿಲೇ ಓಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಲಿಸನ್ ಈ ದಾಖಲೆಯನ್ನು ತಮ್ಮದಾಗಿ ಸಿಕೊಂಡರು.
ಇದು ಅಲಿಸನ್ ಫೆಲಿಕ್ಸ್ ಗೆದ್ದ 12ನೇ ವಿಶ್ವ ಚಾಂಪಿಯನ್ ಚಿನ್ನ. ಉಸೇನ್ ಬೋಲ್ಟ್ 11 ಬಂಗಾರ ಜಯಿಸಿದ್ದರು. 33 ವರ್ಷದ ಫೆಲಿಕ್ಸ್ 5 ವಿಶ್ವ ಆ್ಯತ್ಲೆಟಿಕ್ಸ್ ಕೂಟಗಳಲ್ಲಿ ಸ್ಪರ್ಧಿಸಿ 200 ಮೀ., 400 ಮೀ., 4ಗಿ100 ಮೀ., 4ಗಿ400 ಮೀ. ಮತ್ತು 4ಗಿ400 ಮೀ. ಮಿಕ್ಸೆಡ್ ರಿಲೇ ವಿಭಾಗದಲ್ಲಿ ಒಟ್ಟು 12 ಚಿನ್ನದ ಪದಕ ಜಯಿಸಿದ್ದಾರೆ. ದೋಹಾದಲ್ಲಿ “ಅಮ್ಮಂದಿರ ದಿನ’!
ಅಲಿಸನ್ ಫೆಲಿಕ್ಸ್ ಸಾಧನೆಯೊಂದಿಗೆ ದೋಹಾ ಆ್ಯತ್ಲೆಟಿಕ್ಸ್ ಕೂಟ ರವಿವಾರ “ಅಮ್ಮಂದಿರ ದಿನ’ವಾಗಿ ಮಾರ್ಪಟ್ಟಿತು. ವಿಶ್ವದಾಖಲೆಗೈದ ಫೆಲಿಕ್ಸ್ ಅಮ್ಮನಾದ ಬಳಿಕ ಇದೇ ಮೊದಲ ಸಲ ಬಂಗಾರಕ್ಕೆ ಮುತ್ತಿಟ್ಟಿದ್ದರು. ಇದಕ್ಕೂ ಸ್ವಲ್ಪ ಮೊದಲು 100 ಮೀ. ಓಟದಲ್ಲಿ 4ನೇ ವಿಶ್ವ ಕಿರೀಟ ಏರಿಸಿಕೊಂಡಿದ್ದ ಜಮೈಕಾದ ಶೆಲ್ಲಿ ಆ್ಯನ್ ಫ್ರೆàಸರ್ ಪ್ರೈಸ್ ಕೂಡ ಅಮ್ಮನೇ ಆಗಿದ್ದರು. ಅವರು ತಮ್ಮ 2 ವರ್ಷದ ಮಗ ಜಿಯಾನ್ ಜತೆ ಟ್ರ್ಯಾಕ್‌ನಲ್ಲೇ ಸಂಭ್ರಮ ಆಚರಿಸಿದರು!