Advertisement

ಕೇಂದ್ರ ನೌಕರರ ತುಟ್ಟಿಭತ್ಯೆ ಏರಿಕೆ..! ಸಂಪೂರ್ಣ ಮಾಹಿತಿಗೆ ಈ ಸುದ್ದಿ ಓದಿ

06:30 PM May 25, 2021 | Team Udayavani |

ನವ ದೆಹಲಿ : ಬರುವ ಜುಲೈ 1 ರಿಂದ ಕೇಂದ್ರ ಸರ್ಕರದ ನೌಕರರ ತುಟ್ಟಿಭತ್ಯೆ ಏರಿಕೆಯಾಗುತ್ತಿದೆ. ಸದ್ಯ ಸ‍್ಥಗಿತಗೊಂಡಿರುವ ಮೂರು ಕಂತುಗಳನ್ನು ಮಾತ್ರ ಜಾರಿಗೊಳಿಸಲಾಗುತ್ತಿದ್ದು, ಇದಾದ ಬಳಿಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇಕಡಾ 28ರಷ್ಟಾಗಲಿದೆ.

Advertisement

ಪ್ರಸ್ತುತ ಕೇಂದ್ರ ಸರ್ಕಾರದ ನೌಕರರ  ತುಟ್ಟಿ ಭತ್ಯೆ ಶೇಕಡಾ 17 ರಷ್ಟದ್ದು, ಅದು ಶೇಕಡಾ 28 ರಷ್ಟಾಗಲಿದೆ. ಈ ಏರಿಕೆಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಏಕಕಾಲಕ್ಕೆ ಎರಡು ವರ್ಷಗಳ ಡಿಎ ಲಾಭ ಸಿಗಲಿದೆ.

ಇದನ್ನೂ ಓದಿ : ಸಮಾಜ ಸೇವೆಯ ಹೆಸರಿನಲ್ಲಿ ಸ್ವಜಾತಿ ಮೆರೆಯುವುದು ಸರಿಯಲ್ಲ : ಉಪ್ಪಿ ಸೇವೆಗೆ ಚೇತನ್ ಟೀಕೆ

ಜನವರಿ 2020 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ. ಇದಾದ ಬಳಿಕ ಎರಡನೇ ಅರ್ಧವಾರ್ಷಿಕದಲ್ಲಿ ಅಂದರೆ ಜೂನ್ ನಲ್ಲಿ ಶೇಕಡಾ 3 ರಷ್ಟು ಡಿಎ ಹೆಚ್ಚಿಸಲಾಗಿದೆ. ಇದೀಗ ಜನವರಿ 2021 ರಲ್ಲಿ ಮತ್ತೆ ಶೇಕಡಾ. 4 ರಷ್ಟು ಡಿಎ ಹೆಚ್ಚಳವಾಗಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ. 17 ರಿಂದ ಶೇಕಡಾ.28ಕ್ಕೆ ಏರಿಕೆಯಾದಂತಾಗಿದೆ. ಆದರೆ, ಇದುವರೆಗೆ ಈ ಮೂರು ಕಂತುಗಳ ಡಿಎ ಯನ್ನು ತಡೆಹಿಡಿಯಲಾಗಿದೆ.

ಇನ್ನು,  ಸದ್ಯ ಇರುವ ಕೇಂದ್ರ ಸರ್ಕಾರಿ ನೌಕರರ ಪೇ ಮ್ಯಾಟ್ರಿಕ್ಸ್  ಲೆಕ್ಕದಲ್ಲಿ ಕನಿಷ್ಠ ವೇತನ ಶೇಕಡಾ.18,000 ರೂ.ಗಳಷ್ಟಿದೆ. ಇದರಲ್ಲಿ ಶೇ.15 ರಷ್ಟು ತುಟ್ಟಿಭತ್ಯೆ ಸೇರುವ ನಿರೀಕ್ಷೆ ಇದೆ.  ಇದರಿಂದ ತಿಂಗಳ ವೇತನದಲ್ಲಿ ರೂ.2700 ಏರಿಕೆಯಾಗುವ ನಿರೀಕ್ಷೆ ಇದೆ. ಇದನ್ನು ವಾರ್ಷಿಕ ಆಧಾರದ ಮೇಲೆ ನೋಡುವುದಾದರೆ, ಒಟ್ಟು ಡಿಎ 32400 ರಷ್ಟಾಗಲಿದೆ.

Advertisement

ಇನ್ನೊಂದೆಡೆ ಜೂನ್ 2021ರ ತುಟ್ಟಿಭತ್ಯೆ ಕೂಡ ಘೋಷಣೆಯಾಗುವುದು ಇನ್ನೂ ಬಾಕಿ ಇದೆ. ಇದನ್ನೂ ಒಂದು ವೇಳೆ ಪರಿಗಣಿಸಿದರೆ ಹಿಂದಿನ ಮೂರು ಕಂತುಗಳ ಜೊತೆಗೆ ಮತ್ತೆ ಶೇ.4 ರ ನಾಲ್ಕನೇ ಕಂತಿನ ಹೆಚ್ಚಳ ಕೂಡ ಬಾಕಿ ಉಳಿಯಲಿದೆ ಎಂದೇ ಹೇಳಬಹುದು. ಜೂನ್ ತುಟ್ಟಿಭತ್ಯೆ ಏರಿಕೆಯಿಂದ ಕೇಂದ್ರ ಸರ್ಕಾರಿ ನೌಕರರ ತುಟಿಭತ್ಯೆ ಹಿಂದಿನ ಮೂರು ಕಂತುಗಳನ್ನು ಒಳಗೊಂಡಂತೆ ಶೇಕಡಾ 32  ಕ್ಕೆ ತಲುಪಲಿದೆ.

ಇದನ್ನೂ ಓದಿ : ಸ್ಥಗಿತಗೊಂಡಿದ್ದ ಐಪಿಎಲ್ ಪುನಾರಂಭ: ಅರಬ್ಬರ ನಾಡಿನಲ್ಲಿ ಮತ್ತೆ ನಡೆಯಲಿದೆ ಕ್ರಿಕೆಟ್ ಹಬ್ಬ

Advertisement

Udayavani is now on Telegram. Click here to join our channel and stay updated with the latest news.

Next