Advertisement

7ನೇ ತರಗತಿ ಪರೀಕ್ಷೆ: ಜವಾಬ್ದಾರಿ ಘೋಷಣೆ

10:45 PM Mar 09, 2020 | Lakshmi GovindaRaj |

ಬೆಂಗಳೂರು: 7ನೇ ತರಗತಿ ವಿದ್ಯಾರ್ಥಿಗಳಿಗೆ ಮಾ.16 ರಿಂದ 21ರ ವರೆಗೆ ನಡೆಯಲಿರುವ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಸಂಬಂಧ ವಿವಿಧ ಹಂತದ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

7ನೇ ತರಗತಿ ಮೌಲ್ಯಂಕನಕ್ಕೆ ಸಂಬಂಧಿಸಿದಂತೆ ಉಪ ನಿರ್ದೇಶಕರು (ಆಡಳಿತ), ಉಪ ನಿರ್ದೇಶಕರು (ಅಭಿವೃದ್ಧಿ), ಬಿಇಒ, ಮುಖ್ಯ ಶಿಕ್ಷಕರು, ಮುಖ್ಯ ಅಧೀಕ್ಷರು, ಅಭಿರಕ್ಷಕರು (ಕಸ್ಟೋಡಿಯನ್‌), ಸ್ಥಾನಿಕ ಜಾಗೃತ ದಳ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ಕೊಠಡಿ ಮೇಲ್ವಿಚಾರಕರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ದಿನಾಂಕದಂದು ಗೌಪ್ಯತೆ ಹಾಗೂ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದು ಉಪ ನಿರ್ದೇಶಕರ (ಆಡಳಿತ) ಜವಾಬ್ದಾರಿ. ಪ್ರಶೋತ್ತರ ಪತ್ರಿಕೆಗಳ ವಿತರಣೆ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನಿಯೋಜನೆಗೊಂಡ ಮಾರ್ಗಾಧಿಕಾರಿಗಳ ಪಟ್ಟಿ ಅನುಮೋದಿಸುವುದು ಹಾಗೂ ಮಾರ್ಗಾಧಿಕಾರಿಗಳ ಮೂಲಕ ಪ್ರತಿ ದಿನ ಶಾಲೆಗಳಿಗೆ ವೇಳಾಪಟ್ಟಿಯನ್ವಯ

ನಿಗದಿಪಡಿಸಲಾದ ಆಯಾ ವಿಷಯದ ಪ್ರಶ್ನೋತ್ತರ ಪತ್ರಿಕೆಗಳು ಸರಿಯಾದ ಸಮಯಕ್ಕೆ ಸರಬರಾಜಾಗಿರುವು ದನ್ನು ಖಾತ್ರಿ ಪಡಿಸಿಕೊಳ್ಳುವುದು, ಸೂಕ್ತ ಭದ್ರತೆಯೊಂದಿಗೆ ಭದ್ರತಾ ಕೊಠಡಿಯಲ್ಲಿ ಶೇಖರಿಸಿಟ್ಟಿರುವುದನ್ನು ದೃಢಪಡಿಸಿಕೊಳ್ಳುವುದು ಇವರ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next