Advertisement

87ನೇ ವಾಯುಸೇನಾ ದಿನ: ವೀರ ಯೋಧರಿಗೆ ಗೌರವ

10:30 AM Oct 09, 2019 | keerthan |

ಹೊಸದಿಲ್ಲಿ: ನಮ್ಮ ದೇಶದ ಹೆಮ್ಮೆಯ ವಾಯುಸೇನೆಯ 87ನೇ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ದೆಹಲಿಯ ಹಿಂದಾನ್ ಬೇಸ್ ನಲ್ಲಿ ಆಧುನಿಕ ಮತ್ತು ವಿಂಟೆಜ್ ಯುದ್ದ ವಿಮಾನಗಳ ಪ್ರದರ್ಶನ ನಡೆಯುತ್ತಿದೆ.

Advertisement

ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನಾ ಮುಖ್ಯಸ್ಥ ಆರ್ ಕೆಎಸ್ ಭದೌರಿಯಾ ಮತ್ತು ನೌಕಾಪಡೆ ಮುಖ್ಯಸ್ಥ ಕರಂಬಬೀರ್ ಸಿಂಗ್ ರಾಷ್ಟ್ರೀಯ ಯುದ್ದ ಸ್ಮಾರಕಕ್ಕೆ ಪುಷ್ಪಾರ್ಚನೆ ನಡೆಸಿದರು.

ಭಾರತೀಯ ವಾಯುಪಡೆ 1932ರ ಅಕ್ಟೋಬರ್ 8ರಂದು ಆರಂಭವಾಗಿತ್ತು. ಹಲವಾರು ಯುದ್ದಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹೆಮ್ಮೆ ಭಾರತೀಯ ವಾಯುಪಡೆಗಿದೆ. ಈ ವರ್ಷ ವಿಜಯ ದಶಮಿಯಂದೇ ವಾಯುಸೇನಾ ದಿನಾಚರಣೆ ನಡೆಯಲಿರುವುದಿಂದ ಸಂಭ್ರಮ ದುಪ್ಪಟ್ಟಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ವಾಯುಪಡೆ ಅತ್ಯಂತ ಸಮರ್ಪಣೆ ಮತ್ತು ಶ್ರೇಷ್ಠತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದೆ. ವಾಯುಪಡೆ ಯೋಧರು ಮತ್ತು ಕುಟುಂಬಿಕರಿಗೆ ದೇಶ ಹೆಮ್ಮೆಯಿಂದ ಕೃತಜ್ಞತೆ ಸಲ್ಲಿಸುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next