Advertisement

ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗೆ ಜರ್ಮನಿಯಿಂದ 7,900 ಕೋಟಿ ಹೂಡಿಕೆ

12:36 PM Nov 03, 2019 | Team Udayavani |

ನವದೆಹಲಿ: ದೇಶದ ನಗರ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜರ್ಮನಿ 7,900 ಕೋಟಿ ರೂ. (1 ಬಿಲಿಯನ್‌ ಯೂರೋ)ಗಳನ್ನು ಹೂಡಿಕೆ ಮಾಡಲಿದೆ. ಭಾರತ ಪ್ರವಾಸದಲ್ಲಿರುವ ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ನವದೆಹಲಿಯಲ್ಲಿ ಶನಿವಾರ ಈ ವಾಗ್ಧಾನ ಮಾಡಿದ್ದಾರೆ.

Advertisement

ಮುಂದಿನ ಐದು ವರ್ಷಗಳವರೆಗೆ ತಮ್ಮ ದೇಶ ಈ ನೆರವು ನೀಡಲಿದೆ ಎಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅತ್ಯಂತ ಗಂಭೀರ ರೀತಿಯಲ್ಲಿ ವಾಯು ಮಾಲಿನ್ಯ ಉಂಟಾಗಿರುವ ನಡುವೆಯೇ ಈ ವಾಗ್ಧಾನ ಮಾಡಲಾಗಿದೆ.

ನವದೆಹಲಿಯಾದ್ಯಂತ ಡೀಸೆಲ್‌ ಬದಲಿಗೆ ವಿದ್ಯುತ್‌ ಚಾಲಿತ ಬಸ್‌ಗಳ ಸಂಚಾರ ಶುರು ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇದರ ಜತೆಗೆ ತಮಿಳುನಾಡಿನಲ್ಲಿ 200 ಮಿಲಿಯನ್‌ ಯೂರೋಗಳನ್ನು ಬಸ್‌ ಸಂಚಾರ ಅಭಿವೃದ್ಧಿ ನಿಟ್ಟಿನಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆರೋಗ್ಯ ಕ್ಷೇತ್ರ, ಕೃಷಿ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಜತೆಗೆ ಕೆಲಸ ಮಾಡಲು ತಮ್ಮ ದೇಶ ಉತ್ಸುಕವಾಗಿದೆ ಎಂದು ಮರ್ಕೆಲ್‌ ಹೇಳಿದ್ದಾರೆ.

ಇಸ್ರೇಲ್ ಮೂಲದ ಪೆಗಸಾಸ್ ಎಂಬ ಸ್ಪೈ ಸಾಫ್ಟ್ ವೇರ್, ವಾಟ್ಸಾಪ್ ಮೂಲಕ ಸ್ಮಾರ್ಟ್ ಫೋನ್ ಪ್ರವೇಶಿಸಿ ಮಾಹಿತಿ ಕದಿಯುತ್ತಿದೆ. ವಾಟ್ಸಾಪ್ ಮೂಲಕ ಕಳವಿಗೆ ಒಳಗಾದವರಲ್ಲಿ ಭಾರತೀಯರೂ ಇದ್ದು, ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರ ಮೇಲೆ ಕಣ್ಣಿಡಲಾಗಿತ್ತು ಎನ್ನಲಾಗಿದೆ.  ಈ ಕಾರಣದಿಂದ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next