Advertisement

ಕಳೆದ 15 ದಿನದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 79 ಲಕ್ಷ ರೂ ಮೌಲ್ಯದ ಬಿತ್ತನೆ ಬೀಜ ವಶ

06:36 PM May 31, 2021 | Team Udayavani |

ಬೆಂಗಳೂರು : ಬಿ.ಸಿ.ಪಾಟೀಲ್ ಕೃಷಿ ಸಚಿವರಾಗುತ್ತಿದ್ದಂತಯೇ ಕೃಷಿ ವಿಚಕ್ಷಣಾದಳ (ಜಾಗೃತಕೋಶ)ಮತ್ತಷ್ಟು ಚುರುಕುಗೊಂಡಿದೆ. ಇದೀಗ ಕಳೆದ ಬಾರಿಯಂತೆ ಕೃಷಿ ವಿಚಕ್ಷಣಾ ಇನ್ನಷ್ಟು ಜಾಗೃತಗೊಂಡಿದ್ದು, ತನ್ನ‌ಹದ್ದಿನ ಕಣ್ಣನ್ನು ಬಿಟ್ಟಿದೆ. ಇದರ‌ ಪರಿಣಾಮ ಕಳೆದ ಏಪ್ರಿಲ್,ಮೇ ತಿಂಗಳಿನಲ್ಲಿಸುಮಾರು 79 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬಿತ್ತನೆ ಬೀಜ ಹಾಗೂ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಗೊಬ್ಬರವನ್ನು ರಾಜ್ಯಾದ್ಯಂತ ವಶಪಡಿಸಿಕೊಳ್ಳಲಾಗಿದೆ.

Advertisement

ಕೃಷಿ ಸಚಿವ ಬಿ.ಸಿ.ಪಾಟೀಲರ‌ ಸೂಚನೆ‌ ಮೇರೆಗೆ ಕೃಷಿ ಜಾಗೃತ ದಳದ ಅಪರ ಕೃಷಿ ನಿರ್ದೇಶಕ ಅನೂಪ್ ನೇತೃತ್ವದ ತಂಡ,ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮೆ|| ಶ್ರೀರಾಮ್ ಸೀಡ್ಸ್‌, ನಿಸರ್ಗ ಸೀಡ್ಸ್ ಮಾರಾಟ ಮಳಿಗೆಯಲ್ಲಿ ಹಾಗೂ ಕ್ವಾಲಿಟಿ ಬೀಜ ಸಂಸ್ಕರಣ ಘಟಕದ ಮೇಲೆ ದಾಳಿ ಮಾಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 186.60 ಕ್ವಿಂಟಾಲ್,74.15ಲಕ್ಷ ಮೌಲ್ಯದ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ.

ಅಲ್ಲದೇ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಮೆ||ಸಿದ್ದಾರೂಢ ಅಸೋಸಿಯೇಟ್ ಅಗ್ರಿಕಲ್ಚರ್ ಸೇವಾಕೇಂದ್ರದಿಂದ
35.55ಕ್ವಿಂಟಾಲ್ 90,850 ಮೌಲ್ಯದ ಜಿಪ್ಸಂ ಒಳಗೊಂಡ ಭೂಸುಧಾರಕವನ್ನು ಬಯೋ ಡಿಎಪಿ,ಬಯೋ ಯೂರಿಯಾ, ಕೊಪ್ಪಳ ಜಿಲ್ಲೆಯ ಬಿ.ಹೊಸಹಳ್ಳಿಯ ಅನಧಿಕೃತ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿದ್ದ 171.45 ಕ್ವಿಂಟಾಲ್,3,71,475 ಮೌಲ್ಯದ ಇಫ್‌ಕೋ ಗೊಬ್ಬರ,ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನಾಗಿದ್ದ71,500 ರೂ. ಮೌಲ್ಯದ ಬೇವುರಹಿತ ಯೂರಿಯಾ ರಸಗೊಬ್ಬರ ಸೇರಿದಂತೆ ಕಳೆದ ಏಪ್ರಿಲ್,ಮೇ ತಿಂಗಳಿನ ಹದಿನೈದು ದಿನಗಳಲ್ಲಿ ಒಟ್ಟು 79 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಅಕ್ರಮ ಬಿತ್ತನೆ ಬೀಜ,ಅಕ್ರಮ ಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು,ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಚಕ್ಷಣಾ ದಳ ಮುಂದಾಗಿದೆ.

ಈ ಬಾರಿಯ 2021-22ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು,ರೈತರಿಗೆ ಅಗತ್ಯಕ್ಕನುಸಾರ ಬಿತ್ತನೆಬೀಜ,ರಸಗೊಬ್ಬರವನ್ನು ರಾಜ್ಯ ಕೃಷಿ ಇಲಾಖೆ ಪೂರೈಸುತ್ತಿದ್ದು,ಯಾವುದೇ ಕೊರತೆಯುಂಟಾಗದಂತೆ ಕೃಷಿ ಸಚಿವರು ಇಲಾಖೆಯ ಜೊತೆಗೆ ಸನ್ನದ್ಧರಾಗಿದ್ದಾರೆ.ಆದರೆ ಈ ರೀತಿ ನಕಲಿ ರಸಗೊಬ್ಬರ, ಬಿತ್ತನೆ ನೀಜ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ.ಈ ರೀತಿಯ ಕೃತಕ ಅಭಾವಸೃಷ್ಟಿ ಕಾಳಸಂತೆಯ ಮೇಲೆ ಕೃಷಿ ಸಚಿವರು ಜಾಗೃತದಳದೊಂದಿಗೆ ಹದ್ದಿನ ಕಣ್ಣು ನೆಟ್ಟಿದ್ದು,ಇಂತಹ ಅಪರಾಧ ರೈತರಿಗೆ ಅನ್ಯಾಯವೆಸಗುವುದನ್ನು ಎಂದಿಗೂ ಸಹಿಸುವುದಿಲ್ಲ.ಅಂತಹವರ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸುವುದಾಗಿ ಬಿ.ಸಿ.ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next