Advertisement
ಆದರೆ ಇಂದು ಜಿಲ್ಲೆಯಲ್ಲಿ ಒಟ್ಟು 78 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
Related Articles
Advertisement
ಇನ್ನುಳಿದಂತೆ ಔರಾದ ತಾಲೂಕು 14, ಬಸವಕಲ್ಯಾಣ 12, ಭಾಲ್ಕಿ 8, ಹುಮನಾಬಾದ ತಾಲೂಕಿನಲ್ಲಿ 6 ಹಾಗೂ ಅನ್ಯ ರಾಜ್ಯದ 1 ಪ್ರಕರಣ ಪತ್ತೆಯಾಗಿವೆ.
ಬೀದರ್ ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1715ಕ್ಕೆ ತಲುಪಿದ್ದು, ಅದರಲ್ಲಿ ಬೀದರ್ ತಾಲೂಕು 622, ಬಸವಕಲ್ಯಾಣ 378, ಹುಮನಾಬಾದ 327, ಔರಾದ 204, ಭಾಲ್ಕಿ ತಾಲೂಕು 173 ಮತ್ತು ಅನ್ಯ ರಾಜ್ಯ- ಜಿಲ್ಲೆಯ 11 ಪ್ರಕರಣಗಳು ಸೇರಿವೆ.
ಇದುವರೆಗೆ 1179 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 69 ಜನರು ಸಾವನ್ನಪ್ಪಿದ್ದರೆ. ಇನ್ನೂ 465 ಸಕ್ರಿಯ ಪ್ರಕರಣಗಳಿವೆ.
ಬೀದರ್ ನಗರದ ಆನಂದನಗರ, ಶಿವನಗರ ಉತ್ತರ, ನೌಬಾದ್, ಕೆಜಿಬಿ ಕಾಲೋನಿ, ತಾಲೋಡಿ, ಮಹದೇವನಗರ, ಗುಂಪಾ, ಸಿಎಂಸಿ ಕಾಲೋನಿ, ಎಸ್‌ಬಿಐ ಮುಖ್ಯ ಶಾಖೆ, ಪ್ರತಾಪನಗರ, ಮೈಲೂರ ಗಾಂಧಿ ನಗರ, ಚೌಬಾರಾ, ಓಲ್ಡ್ ಆದರ್ಶ ಕಾಲೊನಿ, ಓಲ್ಡ್ ಸಿಟಿ, ರಾಜೇಂದ್ರ ಕಾಲೋನಿ, ಪಿಟಿಎಸ್ ಪೊಲೀಸ್, ಕೆಎಚ್‌ಬಿ ಕಾಲೊನಿ, ನೆಹರು ಸ್ಟೇಡಿಯಂ ಹೈಟೆಕ್ ಲ್ಯಾಬ್, ದೇವಿ ಕಾಲೋನಿ, ಗಣೇಶ ಮೈದಾನ, ನೂರ್ ಖಾ ತಾಲಿಂ, ಚಿದ್ರಿ, ಶಿವನಗರ, ತಾಲೂಕಿನ ಔರಾದ್ (ಎಸ್), ಕೋಳಾರ, ಮೀರಾಗಂಜ್, ಕಮಠಾಣಾ ಗ್ರಾಮಗಳಲ್ಲಿ ಸೋಂಕು ಪತ್ತೆಯಾಗಿದೆ.
ಭಾಲ್ಕಿ ಪಟ್ಟಣದ ಗಾಂಧಿ ಚೌಕ್ ಸಮೀಪ, ಪತ್ರೆ ಗಲ್ಲಿ, ಬಸವೇಶ್ವರ ವೃತ್ತ, ತಾಲೂಕಿನ ಕಲವಾಡಿ, ನಿಟ್ಟೂರ, ಹಜನಾಳ, ಕೂಡ್ಲಿ ಗ್ರಾಮದಲ್ಲಿ ಬಸವಕಲ್ಯಾಣ ನಗರದ ಕರಿಂ ಕಾಲೋನಿ, ಬಂಜಾರಾ ಕಾಲೋನಿ, ತಾಲೂಕಿನ ಧನ್ನೂರಾ (ಕೆ), ತ್ರಿಪುರಾಂತ, ಮಂಠಾಳ, ತಳಭೋಗ, ಖೇರ್ಡಾ (ಬಿ), ಕಾಶಂಪುರ (ಕೆ) ವಾಡಿ ಹಾಗೂ ಹುಲಸೂರು ಪಟ್ಟಣ. ಹುಮನಾಬಾದ ಪಟ್ಟಣದ ಬೀಬೀ ಗಲ್ಲಿ, ಹೌಸಿಂಗ್ ಬೋರ್ಡ್ ಕಾಲೊನಿ, ಚಿಟಗುಪ್ಪ ತಾಲೂಕಿನ ಪೋಲಕಪಳ್ಳಿ ಚಾಂಗಲೇರಾ, ಮನ್ನಾಎಖ್ಖೆಳ್ಳಿ, ಔರಾದ ಪಟ್ಟಣದ ಪೊಲೀಸ್ ಠಾಣೆ, ಸಂತಪುರ, ಕಪ್ಪಿಕೇರಿ, ತೋರಣಾ, ಕಮಲನಗರ ತಾಲೂಕಿನ ಮುರ್ಕಿ, ಸಿಎಚ್‌ಸಿ ಕಮಲನಗರ, ಬೆಡಕುಂದಾ ಮತ್ತು ನೆರೆಯ ತೆಲಂಗಾಣದ ನಾರಾಯಣ ಖೇಡದ ವ್ಯಕ್ತಿಗೆ ಸೋಂಕು ತಗುಲಿದೆ.