ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ’ ಚಿತ್ರಕಂಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದ್ದು, ಏಕಕಾಲಕ್ಕೆ ಐದೂ ಭಾಷೆಗಳಲ್ಲೂ ಚಿತ್ರದ ಬಿಡುಗಡೆಗೆ ಚಿತ್ರತಂಡ ಭರ್ಜರಿಯಾಗಿ ಪ್ಲಾನ್ ಮಾಡಿಕೊಳ್ಳುತ್ತಿದೆ.
ಇತ್ತೀಚೆಗಷ್ಟೇ”777 ಚಾರ್ಲಿ’ ಚಿತ್ರತಂಡ ಚಿತ್ರದಮೊದಲ ಟೀಸರ್‌ನ ಬಿಡುಗಡೆ ಮಾಡಿತ್ತು. ಈಟೀಸರ್‌ಗೆ ಸೋಶಿಯಲ್ ಮೀಡಿಯಾ ಮತ್ತುಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್‌ವ್ಯಕ್ತವಾಗುತ್ತಿದ್ದು, ಇದು ಚಿತ್ರತಂಡದಭರವಸೆಯನ್ನು ದುಪ್ಟಟ್ಟು ಮಾಡಿದೆ.
ಸದ್ಯ “777ಚಾರ್ಲಿ’ ಟೀಸರ್‌ಗೆ ಇಂಥದ್ದೊಂದು ಪ್ರತಿಕ್ರಿಯೆಸಿಗುತ್ತಿರುವುದನ್ನುಕಂಡುಖುಷಿಯಾಗಿರುವ ಚಿತ್ರತಂಡ ಈಗ “777 ಚಾರ್ಲಿ’ ಸಾಂಗ್ ರಿಲೀಸ್‌ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದೆ.ಇನ್ನೊಂದು ವಿಷಯವೆಂದರೆ, “777 ಚಾರ್ಲಿ’ಚಿತ್ರದ ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ:ಮಹಾನಗರ ಪಾಲಿಕೆ ಚುನಾವಣೆ: ಒಂದರಿಂದ ಒಂಭತ್ತು..ಕೈ-ಕಮಲ ಹಣಾಹಣಿ ಹೀಗಿತ್ತು
ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್,ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್‌ಖಾನ್‌ಕ್ರಮವಾಗಿ ಆಯಾಯ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ಯುವ ನಿರ್ದೇಶಕಕಿರಣ್ ರಾಜ್ ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆಲ್ಯಾಬ್ರಡಾರ್ ನಾಯಿ ಒಂದು ಪೂರ್ಣಪ್ರಮಾಣದ ಪಾತ್ರದಲ್ಲಿ ತೆರೆಮೇಲೆಕಾಣಿಸಿಕೊಂಡಿದೆ. ಸಂಗೀತಾ ಶೃಂಗೇರಿಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಹಾಡುಗಳಿಗೆ ನೋಬಿನ್ ಪೌಲ್‌ಸಂಗೀತ ಸಂಯೋಜಿಸಿದ್ದಾರೆ. “ಪರಂವಾಸ್ಟು ಡಿಯೋಸ್’ ಬ್ಯಾನರ್ ಅಡಿಯಲ್ಲಿ”777 ಚಾರ್ಲಿ’ ಚಿತ್ರಕ್ಕೆ ಜಿ. ಎಸ್ ಗುಪ್ತಾಮತ್ತು ರಕ್ಷಿತ್ ಶೆಟ್ಟಿ ಜಂಟಿಯಾಗಿ ಬಂಡವಾಳಹೂಡಿ ನಿರ್ಮಿಸುತ್ತಿದ್ದಾರೆ.