ಸೂರತ್: ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ಸಮಸ್ಯೆಯು ಪ್ರಾಣಿಗಳಿಗೆ ಭಾರೀ ಅಪಾಯವನ್ನುಂಟುಮಾಡುತ್ತಿದೆ. ಬಹಿರಂಗವಾಗಿ ಬಿಸಾಡಿದ ಪ್ಲಾಸ್ಟಿಕ್ ಕಸವನ್ನು ತಿನ್ನುವುದರಲ್ಲಿ ಬೀದಿ ಹಸುಗಳು ಅತ್ಯಂತ ಹೆಚ್ಚಿನ ಸಂಖ್ಯೆಯದ್ದಾಗಿವೆ. ಅನಾರೋಗ್ಯಕ್ಕೆ ಗುರಿಯಾದ ಹಸುವಿನ ಹೊಟ್ಟೆಯಲ್ಲಿ ಬರೋಬ್ಬರಿ 77 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ಕಸವನ್ನು ಇತ್ತೀಚೆಗೆ ಹೊರತೆಗೆಯಲಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಗುಜರಾತ್‌ನ ಆನಂದ್ ಪ್ರದೇಶದ ಪಶುವೈದ್ಯರು ಹಸುವಿನ ಹೊಟ್ಟೆಯಿಂದ ಕಸವನ್ನು ಹೊರತೆಗೆದಿದ್ದು, ಅದರಲ್ಲಿ ಐಸ್ ಕ್ರೀಮ್ ಕಪ್ ಗಳು ಮತ್ತು ಪ್ಲಾಸ್ಟಿಕ್ ಗ್ಲಾಸ್ ಗಳು ಸೇರಿವೆ.
ವರದಿಯ ಪ್ರಕಾರ, ಅಸ್ವಸ್ಥ ಹಸುವನ್ನು ಎನ್‌ಜಿಒ ಆಸ್ಪತ್ರೆಗೆ ಕರೆದೊಯ್ದು, .ಆನಂದ್‌ನಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯರ ತಂಡ ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಅವಶೇಷಗಳನ್ನು ಹೊರತೆಗೆದಿದೆ.
ಜನರು ಎಸೆದ ಪ್ಲಾಸ್ಟಿಕ್ ತಿಂದು ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಎಲ್ಲೆಡೆ ಹೆಚ್ಚಾಗುತ್ತಿದ್ದು, ಪ್ರತಿ ವಾರ, ಆನಂದ್‌ನಲ್ಲಿರುವ ಈ ಪಶುವೈದ್ಯಕೀಯ ಸಂಸ್ಥೆ ರಸ್ತೆ ಬದಿಯ ತೊಟ್ಟಿಗಳಿಂದ ಪ್ಲಾಸ್ಟಿಕ್ ತಿಂದು ಅಸ್ವಸ್ಥಗೊಂಡ ಮೂರರಿಂದ ನಾಲ್ಕು ಪ್ರಕರಣಗಳನ್ನು ನೋಡುತ್ತಿದೆ.
ಪ್ಲಾಸ್ಟಿಕ್ ಕಸವು ಬಿಡಾಡಿ ದನಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದ ಡಾ.ಪಾರೀಖ್, ಪ್ಲಾಸ್ಟಿಕ್ ಸೇವಿಸಿದ ನಂತರ ಹಸುಗಳಿಗೆ ಅಜೀರ್ಣವಾಗುತ್ತದೆ, ಪ್ಲಾಸ್ಟಿಕ್ ಅನ್ನು ಜೀರ್ಣಿಸಿಕೊಳ್ಳುವ ಅಸಮರ್ಥತೆಯ ಪರಿಣಾಮವಾಗಿ ಹಸುಗಳ ಜೀರ್ಣಕಾರಿ ಶಕ್ತಿಯು ಕಾಲಾನಂತರದಲ್ಲಿ ಹದಗೆಡುತ್ತದೆ, ಇದರಿಂದಾಗಿ ಅವು ಅನಾರೋಗ್ಯಕ್ಕೆ ಒಳಗಾಗುತ್ತವೆ. ಎಂದರು.