ಗದಗ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ದಾಖಲಾದ ವಿವಿಧ ಸ್ವತ್ತುಗಳ ಕಳವು, ವಂಚನೆ ಪ್ರಕರಣಗಳ ಪೈಕಿ 77 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 89 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 64.55 ಲಕ್ಷ ರೂ. ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ ಹೇಳಿದರು.
ನಗರದ ಪೊಲೀಸ್ ಕಲ್ಯಾಣ ಭವನದಲ್ಲಿ ಸೋಮವಾರ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನ, ಬೆಳ್ಳಿ, ಬೈಕ್ ಹಾಗೂ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 21-11-2020 ರಿಂದ 25-10-2021 ವರೆಗೆ ಮನೆಗಳವು, ಸ್ವತ್ತುಗಳ ಕಳ್ಳತನಕ್ಕೆ ಸಂಬಂ ಸಿ 74 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. 80 ಜನ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 33,65,685 ರೂ. ಮೊತ್ತದ 1 ಕೆಜಿ 38 ಗ್ರಾಂ 374 ಮಿಲಿ ಬಂಗಾರದ ಆಭರಣಗಳು ಕಳ್ಳತನವಾಗಿದ್ದು, 29,78,795 ರೂ. ಮೌಲ್ಯದ 887 ಗ್ರಾಂ 633 ಮಿಲಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ
ಎಂದರು.
5 ಕೆಜಿ 274 ಗ್ರಾಂ 34 ಮಿಲಿ ಬೆಳ್ಳಿ ಆಭರಣಗಳ ಪೈಕಿ 5 ಕೆಜಿ 253 ಗ್ರಾಂ 34 ಮಿಲಿ ಬೆಳ್ಳಿ ಆಭರಣಗಳನ್ನು, 35 ವಿವಿಧ ವಾಹನಗಳ ಪೈಕಿ 30 ವಾಹನಗಳನ್ನು ಜಪ್ತಿ ಮಾಡಲಾಗಿದೆ. 5.49 ಲಕ್ಷ ರೂ. ಮೌಲ್ಯದ ತಾಮ್ರದ ತಂತಿ, ಬ್ಯಾಟರಿ, ಸಿಲಿಂಡರ್, ವೆಲ್ಡಿಂಗ್ ಇತ್ಯಾದಿ ವಸ್ತುಗಳು ಕಳುವಾಗಿದ್ದು, ಅದರಲ್ಲಿ 3.89 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕಳವು ಮಾಡಲಾಗಿದ್ದ 8.79 ಲಕ್ಷ ರೂ. ನಗದು ಪೈಕಿ 2.27 ಲಕ್ಷ ರೂ. ಪತ್ತೆ ಮಾಡಿದ್ದಾರೆ. 12.51 ಲಕ್ಷ ರೂ. ಮೊತ್ತದ 3 ವಂಚನೆ ಪ್ರಕರಣಗಳು ದಾಖಲಾಗಿದ್ದು, ಅದಕ್ಕೆ ಸಂಬಂಧಿ ಸಿ 9 ಜನ ಆರೋಪಿಗಳನ್ನು ಬಂ ಧಿಸಿರುವ ಪೊಲೀಸರು, ಅವರಿಂದ 9.79 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ಶಿವಾನಂದ ಪವಾಡಶೆಟ್ಟರ್, ನರಗುಂದ ಡಿಎಸ್ಪಿ ಶಂಕರ್ ರಾಗಿ, ಡಿಸಿಆರ್ ಡಿಎಸ್ಪಿ ವಿಜಯ ಬಿರಾದರ, ಸಿಪಿಐ ಹಾಗೂ ವಿವಿಧ ಠಾಣಾ ಪೊಲೀಸ್ ಅಧಿಕಾರಿಗಳು ಇದ್ದರು.