ಹೊಸದಿಲ್ಲಿ : 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆ ಶಿಕ್ಷೆ ವಿಧಿಸುವ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಅಂಕಿತ ನೀಡಿದ ಒಂದು ದಿನದ ತರುವಾಯ ನಡೆಸಲಾದ ಸಮೀಕ್ಷೆಯಲ್ಲಿ ಶೇ.76 ಮಂದಿ, ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂಬುದನ್ನು ಒಪ್ಪುತ್ತಾರೆ.
ಎನ್‌ಜಿಓ ಸ್ಥಳೀಯ ವಲಯಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಶೇ.18 ಜನರು ಅತ್ಯಾಚಾರಿಗಳಿಗೆ ಪೆರೋಲ್ ಇಲ್ಲದ ಜೀವಾವಧಿ ಜೈಲು ಶಿಕ್ಷೆಯಾಗಬೇಕೆಂದು ಬಯಸುತ್ತಾರೆ; ಶೇ.3 ಜನರು ಈಗಿನ ಕಾನೂನಿನ ಪ್ರಕಾರ ಅತ್ಯಾಚಾರಿಗೆ 7 ವರ್ಷಗಳ ಜೈಲು ಶಿಕ್ಷೆ ಸಾಕೆಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮೀಕ್ಷೆಯು 40,000ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಗಮನಾರ್ಹವಾಗಿದೆ.