Advertisement
ಒಟ್ಟು 90 ನಿಮಿಷಗಳ ಈ ಬಾರಿಯ ಗಣರಾಜ್ಯ ಕಾರ್ಯಕ್ರಮದಲ್ಲಿ ಸೇನೆಯ 3 ವಿಭಾಗಗಳು ಹೊಂದಿರುವ ಶಸ್ತ್ರಾಸ್ತ್ರಗಳ ಸಂಗ್ರಹ, ತಾಂತ್ರಿಕ ಮತ್ತು ಸಂಶೋಧನಾ ವಿಭಾಗದಲ್ಲಿ ಮಾಡಿರುವ ಸಾಧನೆಗಳನ್ನು ಪ್ರದರ್ಶಿಸಲಾಗುತ್ತದೆ. ಕ್ಷಿಪಣಿಗಳು, ಡ್ರೋನ್ ಜ್ಯಾಮರ್‌ಗಳು, ವಾಹನಗಳ ಮೂಲಕ ಯುದ್ಧಭೂಮಿ ಯಲ್ಲಿ ನಿರ್ವಹಿಸುವ ಮೋರ್ಟಾರ್‌ಗಳನ್ನು ಪ್ರದರ್ಶಿಸಲಾಗುತ್ತದೆ.
Related Articles
Advertisement
40 ವರ್ಷಗಳ ಬಳಿಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಅವರು 40 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರೋಟಿನಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿ ಸಲಿದ್ದಾರೆ. ಕರ್ತವ್ಯ ಪಥದಲ್ಲಿ ಕುಳಿತಿರುವ ಅತಿಥಿಗಳ ಮೇಲೆ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಮಾಡಲಾಗುತ್ತದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವದೆಹಲಿಯಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕರ್ನಾಟಕದಿಂದ ಐವರಿಗೆ ಆಹ್ವಾನಈ ಬಾರಿಯ ಗಣರಾಜ್ಯ ದಿನದ ಕಾರ್ಯ ಕ್ರಮಕ್ಕೆ 13 ಸಾವಿರ ಮಂದಿ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಪೈಕಿ ಕರ್ನಾಟಕದ ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ, ಗದಗ್‌ನ ಸಾಹಿತಿ, ಹೊಟೇಲ್ ಉದ್ಯಮಿ ಕಾ.ವೆಂ.ಶ್ರೀನಿವಾಸ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಸಬಾ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದ ನಾಗರಾಜು, ಇದರ ಜತೆಗೆ ಜೋಗುಳ ಹಾಡಿನಿಂದ ಖ್ಯಾತಿ ಪಡೆದ ಬಿ.ಎಂ.ಮಂಜು ನಾಥ್ ಅವರಿಗೆ ಕೂಡ ಆಹ್ವಾನ ಲಭಿಸಿದೆ. ಈ ಬಾರಿಯ ಪ್ರಥಮಗಳು ಏನು?
– ಆರ್ಟಿಲರಿ ರೆಜಿಮೆಂಟ್‌ಗೆ ಸೇರ್ಪಡೆಯಾಗಿರುವ ಲೆ.ದೀಪ್ತಿ ರಾಣಾ, ಲೆ.ಪ್ರಿಯಾಂಕಾ ಸೇವಾx ಪಥ ಸಂಚಲನದಲ್ಲಿ ಭಾಗಿ.
– ಸೇನೆಯ ಮೂರು ವಿಭಾಗಗಳ ಮಹಿಳಾ ಯೋಧರ ಉಪಸ್ಥಿತಿ ಮತ್ತು ಭಾಗಿ
– ಇಸ್ರೋದ ಚಂದ್ರಯಾನ-3 ಯಶಸ್ಸಿನ ಬಗೆಗಿನ ಸ್ತಬ್ದ ಚಿತ್ರ
– ವಿವಿಧ ಕ್ಷೇತ್ರಗಳಲ್ಲಿ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಇಲೆಕ್ಟ್ರಾನಿಕ್ಸ್ ಸಚಿವಾಲಯದ ಸ್ತಬ್ದಚಿತ್ರ.
– ಫ್ರಾನ್ಸ್ ಸೇನೆಯ 95 ಸದಸ್ಯರ ತುಕಡಿ, 2 ರಫೇಲ್ ಯುದ್ಧ ವಿಮಾನ, ಏರ್‌ಬಸ್‌ಎ330 ಬಹೂಪಯೋಗಿ ಸರಕು ಸಾಗಣೆ ವಿಮಾನ ಪ್ರದರ್ಶನ.
– ಭಾರತೀಯ ಪಾರಂಪರಿಕ ವಾದ್ಯಗಳನ್ನು ನುಡಿಸುವ ಮಹಿಳಾ ಕಲಾವಿದರು.
– ಸಿಎಪಿಎಫ್, ಐಎಎಫ್ನ ಮಹಿಳಾ ಯೋಧರು ಭಾಗಿ.
– 40 ವರ್ಷಗಳ ಬಳಿಕ ಸಾರೋಟಿನಲ್ಲಿ ರಾಷ್ಟ್ರಪತಿ ಮುರ್ಮು, ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಆಗಮನ
– ದೇಶಿವಾಗಿಯೇ ನಿರ್ಮಾಣಗೊಂಡ ತೇಜಸ್ ಯುದ್ಧ ವಿಮಾನದ ಪ್ರದರ್ಶನ.