Advertisement

ಮಳೆಯಿಂದ 759.22 ಕೋಟಿ ರೂ. ನಷ್ಟ

02:25 PM Sep 05, 2022 | Team Udayavani |

ಮಂಡ್ಯ: ಮಳೆ ಹಾನಿಗೊಳಗಾದ ಪ್ರದೇಶಗಳನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 759.22 ಕೋಟಿ ರೂ. ನಷ್ಟ ಸಂಭ ವಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಪಂ ಆಡಳಿತಾಧಿಕಾರಿ ಜಯರಾಂ ರಾಯಪುರ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಜೂನ್‌ 1ರಿಂದ ಸೆಪ್ಟಂಬರ್‌ 1ರ ವರೆಗೆ ಜಿಲ್ಲೆಯಾದ್ಯಂತ 759.22 ಕೋಟಿ ರೂ. ನಷ್ಟವಾ ಗಿದ್ದು, ಮಳೆ ಹಾನಿಗೊಳಗಾದ ಕೆರೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಿಂದ ಕೆರೆಗಳ ಪರಿಶೀಲನೆ: ಕೆ.ಆರ್‌.ಪೇಟೆ ತಾಲೂಕಿನ ಅಘಲಯ ಕೆರೆ, ದೊಡ್ಡಕ್ಯಾತನ ಕೆರೆ, ಮಾವಿನ ಕಟ್ಟೆಕೊಪ್ಪಲು ಕೆರೆ ಹಾಗೂ ಲೋಕನಹಳ್ಳಿಯ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಯಾವ ರೀತಿಯಾಗಿ ಪರಿ ಹಾರ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂಬು ದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಚಿಕ್ಕಮಂಡ್ಯ, ಬೀಡಿ ಕಾಲೋನಿಯಲ್ಲಿ ನೀರು ನುಗ್ಗಿರುವ ಹಾಗೂ ಕೆನಲ್‌, ರಸ್ತೆ ಹಾನಿಗಳನ್ನು ಪರಿಶೀಲನೆ ಮಾಡಿ ಮಾಹಿತಿ ಪಡೆದು ಕೊಂಡು ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದರು.

ಮನೆ ಹಾನಿಗೆ ಪರಿಹಾರ: ಮಂಡ್ಯ ಜಿಲ್ಲೆಯಲ್ಲಿ ಒಟ್ಟು 2 ಮಾನವ ಹಾನಿಯಾಗಿದ್ದು, 10 ಲಕ್ಷ ರೂ. ಪರಿಹಾರ ನೀಡಲಾಗಿದೆ. 42 ಮನೆ ಗಳು ಸಂಪೂರ್ಣ ಹಾನಿಯಾಗಿವೆ. ತೀವ್ರ ಹಾನಿ 159, ಭಾಗಶಃ ಹಾನಿ 707 ಸೇರಿದಂತೆ ಒಟ್ಟು 908 ಮನೆಗಳಿಗೆ ಹಾನಿಯಾಗಿದ್ದು, 5,44,6 5,100 ರೂ. ಪರಿಹಾರವಾಗಿ ನೀಡಲಾಗಿದೆ ಎಂದರು. 8 ದೊಡ್ಡ ಜಾನುವಾರುಗಳು, 46 ಸಣ್ಣ ಜಾನು ವಾರು, 4200 ಕೋಳಿಗಳು ನಷ್ಟವಾಗಿದೆ. ಇವುಗಳಿಗೆ 3.88 ಲಕ್ಷ ರೂ. ಪರಿಹಾರವಾಗಿ ನೀಡಲಾಗಿದೆ. ಕೃಷಿ ಬೆಳೆ(ಹೆಕ್ಟರ್‌ಗಳಲ್ಲಿ) 295.80, ತೋಟಗಾರಿಕಾ ಬೆಳೆ 728.77 ಹೆಕ್ಟೇರ್‌ ಹಾನಿಯಾಗಿದ್ದು, ಪರಿಹಾರ ತಂತ್ರಾಂಶದ ಮೂಲಕ ಪರಿಹಾರ ಪಾವತಿಗೆ ಕ್ರಮ ವಹಿಸಲಾಗಿದೆ ಎಂದರು.

Advertisement

ಮೂಲ ಸೌಕರ್ಯಗಳ ಹಾನಿಗಳಲ್ಲಿ ಹಳ್ಳಿ ಪ್ರದೇಶ ದಲ್ಲಿ 255.30 ಕಿ.ಮೀ ರಸ್ತೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 260 ಶಾಲೆಗಳು, 1 ಅಂಗನವಾಡಿಗಳು, 28 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1129 ವಿದ್ಯುತ್‌ ಕಂಬಗಳು ಹಾಗೂ 35 ಟಿಸಿ ಹಾನಿಯಾಗಿದೆ ಎಂದು ಹೇಳಿದರು. ಅನುದಾನಕ್ಕೆ ಅನುಮೋದನೆ: ಶಾಲೆಗಳ ದುರಸ್ತಿಗೆ 466 ಲಕ್ಷ ರೂ., ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ ರೂ., ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 56 ಲಕ್ಷ ರೂ., ಲೋಕೋಪಯೋಗಿ ಇಲಾಖೆ ದುರಸ್ತಿ ಕಾಮಗಾರಿ ಗಳಿಗೆ 104 ಲಕ್ಷ ರೂ., ಪ್ರವಾಹ, ಮಳೆ ಹಾನಿಯಾಗಿರುವುದನ್ನು ಸರಿ ಪಡಿಸಲು ಇಲಾಖಾವಾರು ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.

ಜಿಪಂ ಸಿಇಒ ಶಾಂತ ಎಲ್‌. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಉಪ ವಿಭಾಗಾಧಿಕಾರಿ ಆರ್‌.ಐಶ್ವರ್ಯ ಸೇರಿದಂತೆ ಮತ್ತಿತರರಿದ್ದರು. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಜೂನ್‌ 1ರಿಂದ ಸೆಪ್ಟಂಬರ್‌ 1ರವರೆಗೆ ಜಿಲ್ಲೆಯಾದ್ಯಂತ 759.22 ಕೋಟಿ ರೂ. ನಷ್ಟವಾಗಿದ್ದು, ಮಳೆ ಹಾನಿಗೊಳಗಾದ ಕೆರೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ವಹಿಸಲಾಗುವುದು.– ಜಯರಾಂ ರಾಯಪುರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next