Advertisement

75ರ ಅಜ್ಜ ವೃತ್ತಿಪರ ಫ‌ುಟ್‌ಬಾಲ್‌ಗೆ ಪದಾರ್ಪಣೆ

12:32 PM Mar 12, 2020 | sudhir |

ಕೈರೊ: ತನ್ನ 75ನೇ ಹರೆಯದಲ್ಲಿ ಈಜಿಪ್ಟ್ ನ ಅಜ್ಜ ಎಝೆಲ್‌ದಿನ್‌ ಬಹಾದೆರ್‌ ಅವರು ವೃತ್ತಿಪರ ಫ‌ುಟ್‌ಬಾಲ್‌ಗೆ ಪದಾರ್ಪಣೆಗೈದರಲ್ಲದೇ ಗೋಲನ್ನು ಹೊಡೆದು ಸಂಭ್ರಮಿಸಿದ್ದಾರೆ. ಈ ಮೂಲಕ ವೃತ್ತಿಪರ ಫ‌ುಟ್‌ಬಾಲ್‌ಗೆ ಪದಾರ್ಪಣೆಗೈದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂದೆನಿಸಿಕೊಳ್ಳಲು ದೊಡ್ಡ ಹೆಜ್ಜೆ ಇಟ್ಟಿದ್ದಾರೆ.

Advertisement

ಸ್ವಲ್ಪಮಟ್ಟಿನ ಮೊಣಕಾಲಿನ ಗಾಯವಿದ್ದರೂ ಸ್ಟ್ರೈಕರ್‌ ಬಹಾದೆರ್‌ ಈಜಿಪ್ಟಿಯನ್‌ ಥರ್ಡ್‌ ಟಯರ್‌ ಕ್ಲಬ್‌ ಅಕ್ಟೋಬರ್‌ 6 ಪರ ಆಡಿ ಗಮನ ಸೆಳೆದಿದ್ದಾರೆ. ಪೂರ್ತಿ 90 ನಿಮಿಷಗಳ ಆಟದಲ್ಲಿ ಪಾಲ್ಗೊಂಡರಲ್ಲದೆ ಒಂದು ಗೋಲು ಹೊಡೆದು ತನ್ನಲ್ಲಿ ಇನ್ನೂ ಫ‌ುಟ್‌ಬಾಲ್‌ ಆಡುವ ಉತ್ಸಾಹವಿದೆ ಎಂದು ಸಾಬೀತುಪಡಿಸಿದ್ದಾರೆ. ಅವರ ಈ ಗೋಲಿನಿಂದಾಗಿ ಅಕ್ಟೋಬರ್‌ 6 ತಂಡವು ಎದುರಾಳಿ ಜೀನಿಯಸ್‌ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತ್ತು.

ವಿಶ್ವದ ಅತ್ಯಂತ ಹಿರಿಯ ಆಟಗಾರ
ಎಂದೆನಿಸಿಕೊಳ್ಳಬೇಕಾದರೆ ಬಹಾದೆರ್‌ ಕಡಿಮೆಪಕ್ಷ ಇನ್ನೊಂದು 90 ನಿಮಿಷಗಳ ಆಟದಲ್ಲಿ ಆಡಬೇಕಾಗಿದೆ. ಒಂದು ವೇಳೆ ಈ ತಿಂಗಳಾಂತ್ಯದಲ್ಲಿ ನಡೆಯುವ ಪಂದ್ಯದಲ್ಲಿ ಬಹಾದೆರ್‌ ಅವರನ್ನು ತಂಡದಲ್ಲಿ ಸೇರ್ಪಡೆಗೊಳಿಸಿದರೆ ಗಿನ್ನಿಸ್‌ ವಿಶ್ವದಾಖಲೆಯ ಪ್ರತಿನಿಧಿಯೋರ್ವರು ಆ ಪಂದ್ಯದಲ್ಲಿ ಅವರ ಆಟದ ಸಾಮರ್ಥ್ಯವನ್ನು ಪರೀಕ್ಷಿಸಲಿದ್ದಾರೆ.

ಸದ್ಯ ವಿಶ್ವದ ಅತ್ಯಂತ ಹಿರಿಯ ಆಟಗಾರರೆಂಬ ದಾಖಲೆ ಇಸ್ರೇಲಿನ ಐಸಾಕ್‌ ಹಾಯಿಕ್‌ ಅವರ ಹೆಸರಲ್ಲಿದೆ. ಅವರು ತನ್ನ 73ರ ಹರೆಯದಲ್ಲಿ ಇಸ್ರೇಲಿನ ಐರೋನಿ ಓರ್‌ ಯೆಹುದಾ ಕ್ಲಬ್‌ ಪರ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next