Advertisement

Fraud: ವಿಮೆ ಹಣದ ಹೆಸರಲ್ಲಿ 74,500 ರೂ. ವಂಚನೆ

12:02 AM Jul 12, 2023 | Team Udayavani |

ಮಂಗಳೂರು: ವಿಮೆ ಯೋಜನೆಯ ಮೆಚ್ಯುರಿಟಿ ಹಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 74,500 ರೂ. ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ದೂರುದಾರರ ಪತಿ ವಿಮಾ ಕಂಪೆನಿಯೊಂದರಲ್ಲಿ ಪಾಲಿಸಿ ಮಾಡಿಸಿಕೊಂಡಿದ್ದು, 2017ರಲ್ಲಿ ಅದರ ಅವಧಿ ಮುಗಿದಿತ್ತು. ವಿದೇಶದಲ್ಲಿದ್ದ ಕಾರಣ ಅವರು ಈ ಕುರಿತು ಹೆಚ್ಚು ಗಮನ ಹರಿಸಿರಲಿಲ್ಲ. ಅಲ್ಲಿಂದ ಮರಳಿದ ಹಿನ್ನೆಲೆಯಲ್ಲಿ ಜು. 5ರಂದು ವಿಮಾ ಕಂಪೆನಿಯ ಈ ಮೇಲ್‌ ಐಡ್‌ ಸರ್ಚ್‌ ಮಾಡಿ ಅದಕ್ಕೆ ವಿಮೆಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಮೇಲ್‌ ಮಾಡಿದ್ದರು.

ಜು. 9ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ವಿಮಾ ಕಂಪೆನಿ ಕಡೆಯಿಂದ ಮಾತನಾಡುತ್ತಿದ್ದು, ವಿಮೆಯ ಮೊತ್ತವನ್ನು ಪಡೆಯಬೇಕಿದ್ದರೆ ಮುಂಗಡವಾಗಿ 75 ಸಾವಿರ ರೂ. ಪಾವತಿಸಬೇಕು ಎಂದನು. ಇದನ್ನು ನಂಬಿದ ಅವರು ಆತ ತಿಳಿಸಿದ ಖಾತೆಗೆ 74,500 ರೂ. ಹಣ ವರ್ಗಾವಣೆ ಮಾಡಿದರು. ಬಳಿಕ ಆತನಿಂದ ಯಾವುದೇ ಮಾಹಿತಿ ಇಲ್ಲ. ಈ ರೀತಿ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next