Advertisement

ಹಿ.ಪ್ರ: ಶೇ.74 ಮತದಾನ

07:00 AM Nov 10, 2017 | Team Udayavani |

ಹೊಸದಿಲ್ಲಿ: ಹಿಮಾಚಲ ಪ್ರದೇಶದ ವಿಧಾನಸಭೆಗೆ ಗುರುವಾರ ಮತದಾನ ನಡೆದಿದ್ದು, ದಾಖಲೆಯ ಶೇ. 74ರಷ್ಟು ಜನ ಮತ ಚಲಾಯಿಸಿದ್ದಾರೆ. ಶಾಂತಿ ಯುತವಾಗಿ ಮತದಾನ ನಡೆದಿದೆ. ಎಲ್ಲ 68 ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಮೊದಲ ಬಾರಿಗೆ 11,283 ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲಾ ಗಿತ್ತು. ಹಲವೆಡೆ ಮತ ದೃಢೀಕರಣ ಪತ್ರ ನೀಡುವಲ್ಲಿ ಯಂತ್ರ ಕೈಕೊಟ್ಟಿತ್ತು. ಹೀಗಾಗಿ 297 ಯಂತ್ರಗಳನ್ನು ಬದಲಿಸ ಬೇಕಾಯಿತು. ಇವೆಲ್ಲವೂ ತಾಂತ್ರಿಕ ಸಮಸ್ಯೆಗಳಾಗಿದ್ದವು ಎಂದು ಚುನಾ ವಣಾ ಆಯೋಗ ಹೇಳಿದೆ. ಮತ ಎಣಿಕೆ ಡಿ.18ರಂದು ನಡೆಯಲಿದೆ.

Advertisement

ಈ ಬಾರಿ ಶೇ. 74ರಷ್ಟು ಮತದಾನವಾಗಿದ್ದು ದಾಖಲೆಯಾಗಿದೆ. 2012ರ ಚುನಾವಣೆಯಲ್ಲಿ ಶೇ.73.5ರಷ್ಟು ಮತದಾನ ನಡೆದಿತ್ತು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಶೇ.64.45 ಮತದಾನ ನಡೆದಿತ್ತು.

29ನೇ ಬಾರಿಗೆ ಮತ!
ಭಾರತದ ಪ್ರಥಮ ಮತದಾರ ಶ್ಯಾಮ್‌ ಸರಣ್‌ ನೇಗಿ ಹಿಮಾಚಲ ಪ್ರದೇಶದಲ್ಲಿ ಗುರುವಾರ ಮತ ಚಲಾಯಿಸಿದರು. 100 ವರ್ಷ ಪೂರೈಸಿದ ನೇಗಿಯವರನ್ನು ಮತಗಟ್ಟೆ ಅಧಿಕಾರಿಗಳು ಕೈ ಹಿಡಿದು, ಕೆಂಪುಹಾಸಿನ ಮೇಲೆ ವಾದ್ಯಮೇಳ ದೊಂದಿಗೆ ಮತಗಟ್ಟೆಗೆ ಕರೆತಂದರು. 1951 ರಿಂದ ತಪ್ಪದೇ ಎಲ್ಲ ಚುನಾವಣೆಗಳಲ್ಲೂ ಮತ ಚಲಾವಣೆ ಮಾಡುತ್ತಿದ್ದು, 29ನೇ ಬಾರಿಗೆ ಮತ ಚಲಾವಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next