ಕಡಲೂರು, ತಮಿಳು ನಾಡು : ಜಿಲ್ಲೆಯ ದೇವಸ್ಥಾನವೊಂದರಲ್ಲಿ ಅನ್ನ ಪ್ರಸಾದ ತಿಂದ ಆರು ಮಕ್ಕಳು ಮತ್ತು 14 ಮಹಿಳೆಯರು ಸೇರಿದಂತೆ ಒಟ್ಟು 73 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ ಘಟನೆ ವರದಿಯಾಗಿದೆ.
ಹಬ್ಬದ ಅಂಗವಾಗಿ ವಿ ಶತಮಂಗಲಂ ಗ್ರಾಮದ ಅಮ್ಮನ್ ದೇವಳದಲ್ಲಿ ಭಕ್ತಾದಿಗಳು ಅನ್ನ – ಸಾಂಬಾರು ಪ್ರಸಾದ ತಿಂದು ಅಸ್ವಸ್ಥರಾದರೆಂದು ಪೊಲೀಸರು ತಿಳಿಸಿದ್ದಾರೆ.
ಅನ್ನ ಪ್ರಸಾದ ತಿಂದ ಭಕ್ತಾದಿಗಳು ತಲೆ ಸುತ್ತುವಿಕೆ ಅನುಭವಿಸಿ ವಾಂತಿ ಮಾಡಿಕೊಂಡಾಗ ಅವರನ್ನು ಕೂಡಲೇ ಇಲ್ಲಿಗೆ ಸಮೀಪದ ವಿರೂದಾಚಲಂ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
ಅನ್ನ ಸಾಂಬಾರ್‌ನಲ್ಲಿ ಸತ್ತ ಹಲ್ಲಿಯೊಂದು ಕಂಡು ಬಂದಿತ್ತು ಎಂದು ಕೆಲವು ಭಕ್ತರು ಹೇಳಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಳೆದ ಎ.5ರಂದು ಕೊಯಮುತ್ತೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪ್ರಸಾದ ತಿಂದು 30 ಮಂದಿ ಅಸ್ವಸ್ಥರಾಗಿದ್ದರು.