Advertisement

72.4 ಕೋ. ರೂ. ವೆಚ್ಚದಲ್ಲಿ 24×7 ಶುದ್ಧ ನೀರು ಪೂರೈಕೆ: ಶಾಸಕ ಮಠಂದೂರು

10:38 PM Jun 28, 2019 | Team Udayavani |

ಪುತ್ತೂರು: ಎಡಿಬಿ ಪ್ರಾಯೋ ಜಿತ 72.4 ಕೋಟಿ ರೂ. ವೆಚ್ಚದ 2ನೇ ಹಂತದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ನಗರ ದಲ್ಲಿ ದಿನದ 24 ತಾಸು ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ನಾನಾ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ ದರು. ನಗರದಲ್ಲಿ 60 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಪ್ರಸ್ತುತ ಉಪ್ಪಿನಂಗಡಿ ಕುಮಾರಧಾರಾದಿಂದ ದಿನನಿತ್ಯ 6.5 ಎಂಎಲ್ಡಿ ನೀರು ಹಾಗೂ ಕೊಳವೆ ಬಾವಿಯಿಂದ ನೀರು ಪೂರೈಸಲಾಗು ತ್ತಿದ್ದರೂ, ಬೇಡಿಕೆಗೆ ತಕ್ಕಂತೆ ಪೂರೈಕೆಯ ಕೊರತೆ ಇದೆ ಎಂದರು.

ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಆಗ್ರಹ
ನಗರಕ್ಕೆ ಒಳಚರಂಡಿ ಯೋಜನೆ ಅನು ಷ್ಠಾನಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಬೇಡಿಕೆ ಇರಿಸಿದ್ದಾರೆ. ಸುಮಾರು 125 ಕೋಟಿ ರೂ. ಅನುದಾನದ ಅಗತ್ಯವಿದೆ. ಭೂಸ್ವಾಧೀನ ಆಗಬೇಕಾಗುತ್ತದೆ. ನಗರದ ಜನ ಸಹಕರಿಸಿದರೆ ಯೋಜನೆ ಅನುಷ್ಠಾನ ಸಾಧ್ಯ ಎಂದವರು ತಿಳಿಸಿದರು.

ಸದುಪಯೋಗಪಡಿಸಿಕೊಳ್ಳಿ
ನಗರ ಬಡತನ ನಿರ್ಮೂಲನಾ ಕೋಶದಿಂದ ನೀಡಲಾಗುವ ನಾನಾ ಯೋಜನೆಗಳ ಚೆಕ್‌ಗಳನ್ನು ವಿತರಿಸಿದ ಶಾಸಕರು, ಸಮಾಜದ ಕಟ್ಟಕಡೆಯ ವ್ಯಕ್ತಿಯು ಸ್ವಾಭಿಮಾನದಿಂದ ಜೀವನ ಸಾಗಿಸಲು ಸರಕಾರ ಪ್ರತೀ ವರ್ಷ ಸಾವಿ ರಾರು ಕೋಟಿ ರೂ. ಖರ್ಚು ಮಾಡು ತ್ತದೆ. ಇದನ್ನು ಫಲಾನುಭವಿಗಳು ಅರಿತು ಕೊಂಡು ಸವಲತ್ತುಗಳ ಸದು ಪಯೋಗ ಮಾಡಿಕೊಳ್ಳಬೇಕು. ಶೇ. 25 ಅನುದಾನ ವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗುತ್ತದೆ. ಇದರ ಉದ್ದೇಶ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆ ತರುವುದಾಗಿದೆ ಎಂದರು.

ಮಾದರಿ ಆಡಳಿತಕ್ಕೆ ಆದ್ಯತೆ
4 ದಶಕಗಳ ಹಿಂದೆ ಉಡುಪಿ ಮತ್ತು ಪುತ್ತೂರು ನಗರಗಳಲ್ಲಿ ಆದರ್ಶಯುತ ಆಡಳಿತ ವ್ಯವಸ್ಥೆ ಇತ್ತು ಮತ್ತು ರಾಜ್ಯಕ್ಕೆ ಇವು ಮಾದರಿಯಾಗಿದ್ದವು. ಅದೇ ಆದರ್ಶವನ್ನು ಈಗ ನಾವು ಮತ್ತೆ ಅನುಷ್ಠಾನಕ್ಕೆ ತರಬೇಕಿದೆ. ಆದರೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಆಡಳಿತ ವ್ಯವಸ್ಥೆ ರಚಿಸಲು ಕಾಯಬೇಕಾದ ಸ್ಥಿತಿ ಇದೆ. ಆ ದಿನ ಬೇಗ ಬರಲಿ ಎಂದು ಆಶಿಸಿದ ಶಾಸಕರು, ಕೇಂದ್ರ ಸರಕಾರದ ಸ್ವಚ್ಛಮೇವ ಜಯತೇ ಘೋಷಣೆಯಂತೆ ಸ್ವಚ್ಛ ನಗರ,ಸ್ವಚ್ಛ ಆಡಳಿತ ಬರಬೇಕಿದೆ ಎಂದರು.

Advertisement

1.5 ಕೋಟಿ ರೂ. ವಿತರಣೆ
ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ ಮಾತನಾಡಿ, ಎಸ್‌ಎಫ್‌ಸಿ, ನಗರಸಭೆ ಅನುದಾನ ಸೇರಿದಂತೆ ಬಡತನ ನಿರ್ಮೂಲನಾ ಯೋಜನೆ ಯಲ್ಲಿ 2018- 19ನೇ ಸಾಲಿನಲ್ಲಿ ಸುಮಾರು ಒಂದೂವರೆ ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಸಮಾಜ ಕಲ್ಯಾಣಾಧಿಕಾರಿ ಗಾಯತ್ರಿ ಮಾತನಾಡಿದರು. ನಗರಸಭೆ ಸಮುದಾಯ ಸಂಘಟನಾಧಿಕಾರಿ ಚಂದ್ರ ಕುಮಾರ್‌ ಸ್ವಾಗತಿಸಿ, ವಂದಿಸಿದರು.

ಫ‌ಲಾನುಭವಿಗಳಿಗೆ ಚೆಕ್‌, ಪ್ರಮಾಣಪತ್ರ
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾನಾ ಯೋಜನೆಗಳ ಚೆಕ್‌ ವಿತರಿಸ ಲಾಯಿತು. ಶೇ. 24.10 ಎಸ್‌ಎಫ್‌ಸಿ ನಿಧಿಯಲ್ಲಿ ಶೌಚಾಲಯ ರಚನೆಗೆ 4 ಜನರಿಗೆ ತಲಾ 15,000 ರೂ., ಜಲ ಸಂಪರ್ಕ ಸಹಾಯಧನವನ್ನು ತಲಾ 6 ಸಾವಿರದಂತೆ ಮೂವರಿಗೆ, ವಿದ್ಯುತ್‌ ಸಂಪರ್ಕಕ್ಕೆ ತಲಾ 13,000 ರೂ.ಗಳಂತೆ 6 ಫಲಾನುಭವಿಗಳಿಗೆ ಚೆಕ್‌ ವಿತರಿಸಲಾ ಯಿತು. ನಗರಸಭೆಯ 24.10 ಶೇಕಡಾ ನಿಧಿಯಡಿ ಪೌರಕಾರ್ಮಿಕರ ಮನೆ ದುರಸ್ತಿಗೆ 20,000 ರೂ.ಗಳಂತೆ ಇಬ್ಬರಿಗೆ, 2016-17ನೇ ಸಾಲಿನ ಶೇ. 24.10 ಎಸ್‌ಎಫ್‌ಸಿ ನಿಧಿಯಲ್ಲಿ ಆಟೋ ರಿಕ್ಷಾ ಖರೀದಿಗೆ ಮೂವರಿಗೆ ಒಟ್ಟು 3 ಲಕ್ಷ ರೂ. ನೀಡ ಲಾಯಿತು. ತಲಾ 2,500 ರೂ.ಗಳಂತೆ 58 ವಿಕಲ ಚೇತನರಿಗೆ ಶೇ. 3 ಎಸ್‌ಎಫ್‌ಸಿ ನಿಧಿಯಲ್ಲಿ ಹಣ ನೀಡಲಾಯಿತು. 8 ಮಂದಿಗೆ ವಾಹನ ಚಾಲನ ಪ್ರಮಾಣಪತ್ರ, 4 ಮಂದಿಗೆ ವಾಹನ ಚಾಲನ ತರಬೇತಿ ಆದೇಶ ವಿತರಿಸಲಾಯಿತು. ತರಬೇತಿಗಾಗಿ 29 ಅರ್ಜಿಗಳು ಬಂದಿರುವುದನ್ನು ಪ್ರಕಟಿಸಲಾಯಿತು. ಡೇ ನಲ್ಮ್ ಯೋಜನೆ ಯ ಅಡಿಯಲ್ಲಿ 2017-18ನೇ ಸಾಲಿ ನಲ್ಲಿ ಬ್ಯೂಟೀಷಿಯನ್‌ ತರಬೇತಿ ಪಡೆದ 10 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next