Advertisement

Fraud Case; ಷೇರು ವ್ಯವಹಾರ ಹೆಸರಿನಲ್ಲಿ 72.31 ಲಕ್ಷ ರೂ. ವಂಚನೆ

10:48 PM Mar 05, 2024 | Team Udayavani |

ಮಂಗಳೂರು: ಆನ್‌ಲೈನ್‌ನಲ್ಲಿ ಷೇರು ಮಾರುಕಟ್ಟೆ ವ್ಯವಹಾರದ ನೆಪದಲ್ಲಿ ವ್ಯಕ್ತಿಯೋರ್ವರಿಗೆ 72.31 ಲಕ್ಷ ರೂ ವಂಚಿಸಿರುವ ಘಟನೆ ನಡೆದಿದೆ.

Advertisement

ಪ್ರಭಾಕರ ವಂಚನೆಗೊಳಗಾದವರು. ಅವರು ಫೇಸ್‌ಬುಕ್‌ ನೋಡುತ್ತಿದ್ದಾಗ ಷೇರು ಮಾರುಕಟ್ಟೆ ಬಗ್ಗೆ ಜಾಹಿರಾತು ಇತ್ತು. ಸಬ್‌ಸೆಬ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿದಾಗ ಅದರಲ್ಲಿ ಒಂದು ಲಿಂಕ್‌ ಮೂಲಕ ಎರಡು ಆ್ಯಪ್‌ ಡೌನ್‌ಲೋಡ್‌ ಆಯಿತು. ಅದರಲ್ಲಿ ವಿಳಾಸವನ್ನು ನೀಡಿದ ಬಳಿಕ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಗೊಳಿಸ ಲಾಯಿತು.ಮೊದಲಿಗೆ 50 ಸಾವಿರ ರೂ.ಗಳನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಪ್ರಭಾಕರ ಅವರು ಹಣ ಹಾಕಿದ್ದರು. ಅನಂತರ ಮತ್ತೆ ಬೇರೆ ಬೇರೆ ಷೇರುಗಳನ್ನು ಖರೀದಿಸುವಂತೆ ತಿಳಿಸಿದಾಗ ಅವರು ಹಂತ ಹಂತವಾಗಿ 72,31,017 ರೂ.ಗಳನ್ನು ವರ್ಗಾಯಿ ಸಿದ್ದರು.

ತನ್ನ ಷೇರುಗಳನ್ನು ಮಾರಾಟ ಮಾಡುವುದಾಗಿ ಪ್ರಭಾಕರ ಅವರು ತಿಳಿಸಿದಾಗ ಅದಕ್ಕೆ ಶೇ.10ರಷ್ಟು ತೆರಿಗೆ ಕಟ್ಟುವಂತೆ ತಿಳಿಸಲಾಯಿತು. ಆಗ ಪ್ರಭಾಕರ ಅವರಿಗೆ ತಾನು ಮೋಸ ಹೋಗಿರುವುದು ತಿಳಿಯಿತು. ಮಂಗ ಳೂರಿನ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next