Advertisement
ಗಣರಾಜ್ಯೋತ್ಸವ ಅಂಗವಾಗಿ ರವಿ ವಾರ ವಿದ್ಯಾನಗರದ ನಗರಸಭೆ ಕ್ರೀಡಾಂಗಣ ದಲ್ಲಿ ಜರಗಿದ ಜಿಲ್ಲಾ ಮಟ್ಟದ ಸಮಾ ರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿ, ಪಥಸಂಚಲನದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನದ ನೆಲೆಗಟ್ಟಿನಲ್ಲಿ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದೆ. ಪೂರ್ವಿಕರು ನಡೆಸಿದ ಹೋರಾಟ, ತ್ಯಾಗ ಇವುಗಳ ಫಲವಾಗಿ ನಾವಿಂದು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇವೆ ಎಂದ ಅವರು ಸಂವಿಧಾನದ ಮೌಲ್ಯಗಳಿಂದಾಗಿ ಇಂದು ವಿಶ್ವವೇ ನಮ್ಮ ದೇಶವನ್ನು ಗೌರವಿ ಸುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸುವವರೇ ನಿಜವಾದ ದೇಶಭಕ್ತರು. ಸಂವಿಧಾನದ ಮೌಲ್ಯಗಳನ್ನು ದುರ್ಬಲ ಗೊಳಿಸಲು ಯತ್ನ ನಡೆಸಲು ಕೆಲವು ಶಕ್ತಿಗಳು ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು ಅದನ್ನು ವಿರೋಧಿಸಿ, ಯಾವುದೇ ಬೆಲೆತೆತ್ತು ಮೌಲ್ಯಗಳನ್ನು ಸಂರಕ್ಷಿಸಲು ನಾವು ಕಟಿಬದ್ಧರು. ದೇಶಪ್ರೇಮಿಗಳಾದ ಯುವಜನತೆ ಮತ್ತು ವಿದ್ಯಾರ್ಥಿಗಳು ಇದರ ನೇತೃತ್ವ ವಹಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರಜಾತಂತ್ರ ವ್ಯವಸ್ಥೆ, ಮತೇತರ ಸಂಕಲ್ಪ, ಸಂವಿಧಾನ ದೇಶದ ಸಮಗ್ರ ಅಭಿವೃದ್ಧಿಯ ಅಡಿಪಾಯವಾಗಿದ್ದು, ಈ ವ್ಯವಸ್ಥೆಯ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಗೆ ಆದ್ಯತೆ ಕಲ್ಪಿಸಲಾಗಿದೆ. ಪ್ರಜಾತಂತ್ರವೂ ಪ್ರತಿಯೊಬ್ಬನಿಗೂ ಸ್ವಾತಂತ್ರ್ಯ, ಮೂಲಭೂತ ಹಕ್ಕು, ನ್ಯಾಯವನ್ನು ಕಲ್ಪಿಸುತ್ತದೆ. ದೇಶವನ್ನು ಮತೇತರ ಆಶಯದೊಂದಿಗೆ ಮುನ್ನಡೆಸುವುದು ಗಣರಾಜ್ಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
Related Articles
Advertisement
ಕುರುಡುತನ ಬದಲಿಸಿಸುಕ್ಷೇಮ ರಾಷ್ಟ್ರ ನಿರ್ಮಾಣದ ಕನಸು ನನಸು ಮಾಡುವಲ್ಲಿ ನಮ್ಮ ಯತ್ನದ ಪ್ರಯಾಣವನ್ನು ತ್ವರಿತಗೊಳಿಸ ಬೇಕಾದ ಅಗತ್ಯವಿದೆ. ವಿಭಜನೆ ಮತ್ತು ಅವೈಜ್ಞಾನಿಕ ಕುರುಡುತನವನ್ನು ಬದಲಿಸಿ ಪ್ರಗತಿಪರ ಚಿಂತನೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಗಿರುವ ಇಂಧನವನ್ನಾಗಿ ಬೆಳಕಿನತ್ತ ಸಾಗಬೇಕಾದ ಅಗತ್ಯವಿದೆ ಎಂದು ಹೇಳಿದರು. ಕುಂಬಳೆ: ಪೈವಳಿಕೆನಗರ ಸರ ಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಗಣ ರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಪ್ರಾಂಶು ಪಾಲ ವಿಶ್ವನಾಥ ಕುಂಬಳೆ ಧ್ವಜಾರೋಹಣಗೈದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಅವರು ಸಂದೇಶ ನೀಡಿದರು. ಮುಖ್ಯ ಶಿಕ್ಷಕ ಇಬ್ರಾಹಿಂ ಬುಡ್ರಿಯ ಅಧ್ಯಕ್ಷತೆ ವಹಿಸಿದ್ದರು. ಸ್ಟಾಫ್ ಸೆಕ್ರೆಟರಿ ಅಬ್ದುಲ್ ಲತೀಫ್ ಕೊಕ್ಕೆಚಾಲ್ ಸಂವಿಧಾನದ ಮುನ್ನುಡಿ ವಿವರಿಸಿದರು. ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್ ಕಾರ್ಯಕ್ರಮ ನಿರ್ವಹಿಸಿದರು. ದೆ„ಹಿಕ ಶಿಕ್ಷಕ ಕೆ ಎಂ ಬಲ್ಲಾಳ್ ನೇತƒತ್ವ ನೀಡಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ರಫೀಕ್ ಅತಿಥಿಯಾಗಿದ್ದರು. ವಿದ್ಯಾರ್ಥಿ ಪ್ರತಿನಿಧಿ ಅಭಿನಂದನ್ ಅಸೆಂಬ್ಲಿಯ ನೇತƒತ್ವ ನೇತƒತ್ವ ವಹಿಸಿದ್ದರು.