ಬೆಳಗಾವಿ: ಕೋವಿಡ್ 2ನೇ ಅಲೆಯ ಪರಿಣಾಮ ಕರ್ನಾಟಕ ಹಾಲು ಒಕ್ಕೂಟಗಳ ಸ್ಥಿತಿದಯನೀಯವಾಗಿದೆ.ಹಾಲು ಸಂಗ್ರಹ ಇತಿಹಾಸ ನಿರ್ಮಾಣ ಮಾಡಿದ್ದರೆ, ಸಂಗ್ರಹ ಮಾಡಿದ ಹಾಲನ್ನು ಹೇಗೆ ಮಾರಾಟ ಮಾಡಬೇಕು.ಅದರಿಂದ ಉತ್ಪಾದನೆಯಾಗುವ ಹಾಲಿನ ಪುಡಿಯನ್ನು ಎಲ್ಲಿ ಕೊಡಬೇಕು ಎಂಬುದು ಸವಾಲಾಗಿ ಪರಿಣಮಿಸಿದೆ.
ಕಳೆದ ಸಾಲಿನಲ್ಲಿ ರಾಜ್ಯದ ಎಲ್ಲ 14 ಒಕ್ಕೂಟಗಳಲ್ಲಿ 82 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು. ಆಗ ಲಾಕ್‌ಡೌನ್ ಸ್ವಲ್ಪಮಟ್ಟಿಗೆ ಮುಕ್ತವಾಗಿದ್ದರ ಪರಿಣಾಮ ಅಂತಹ ಸಮಸ್ಯೆ ಕಾಣಲಿಲ್ಲ. ಆದರೆ ಈ ಬಾರಿ ದಾಖಲೆಯ 90 ಲಕ್ಷ ಲೀ. ಹಾಲು ಸಂಗ್ರಹವಾಗಿದೆ. ಇದು ಕೆಎಂಎಫ್ ಇತಿಹಾಸದಲ್ಲಿ ಹೊಸ ದಾಖಲೆ. ಆದರೆ ಇದರಿಂದ ಸಂತಸ ಪಡುವ ಸ್ಥಿತಿ ಇಲ್ಲ. ಕೋವಿಡ್ 2ನೇ ಅಲೆ ಎಲ್ಲದಕ್ಕೂ ಭಾರೀ ಹೊಡೆತ ನೀಡಿದೆ.
ಹಾಲಿನ ಪುಡಿಗೆ 700 ಕಿಮೀ ಪ್ರಯಾಣ: ಈಗ ಸಂಗ್ರಹವಾಗುವ 90 ಲಕ್ಷ ಲೀಟರ್ ಹಾಲಿನಲ್ಲಿ 49 ಲಕ್ಷ ಲೀ. ಮಾರಾಟವಾಗುತ್ತಿದೆ. ಉಳಿದ ಹಾಲನ್ನು ಅನಿವಾರ್ಯವಾಗಿ ಪುಡಿ ಮಾಡಲೇಬೇಕಾಗಿದೆ. ಆದರೆ ಇಲ್ಲಿಯೂ ಸಮಸ್ಯೆ ಇದೆ. ಕರ್ನಾಟಕದಲ್ಲಿನ 14 ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ನಲ್ಲಿ 28 ಲಕ್ಷ ಲೀಟರ್ ಹಾಲಿನ ಪುಡಿ ಮಾಡುವ ಸಾಮರ್ಥ್ಯ ಇದೆ. ಉಳಿದ 20 ಲಕ್ಷ ಲೀಟರ್ ಹಾಲನ್ನು ಬೇರೆ ರಾಜ್ಯಗಳಿಗೆಕಳಿಸಿ ಪುಡಿ ಮಾಡಬೇಕು. ಸಮೀಪದ ಅಂಧ್ರ ಹಾಗೂಕೊಲ್ಲಾಪುರಕ್ಕೆ ಕಳಿಸಿ ಹೇಗೋ ನಿಭಾಯಿಸಲಾಗುತ್ತಿತ್ತು. ಆದರೆ ಈಗ ಕೋವಿಡ್ ಕಾರಣ ಹಾಲಿನ ಪುಡಿ ಮಾಡಲು 700 ಕಿಮೀ ದೂರ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.
ರಾಜ್ಯದಲ್ಲಿ ಈಗ 14 ಹಾಲು ಒಕ್ಕೂಟ ಮತ್ತು ಕರ್ನಾಟಕ ಹಾಲು ಮಹಾಮಂಡಳದಲ್ಲಿ ಒಟ್ಟು 18,200 ಮೆಟ್ರಿಕ್ ಟನ್ ಹಾಲಿನ ಪುಡಿ ಸಂಗ್ರಹವಿದೆ. ಪ್ರತಿನಿತ್ಯ 1000 ಮೆಟ್ರಿಕ್ ಟನ್ ಹಾಲಿನ ಪುಡಿ ತಯಾರಾಗುತ್ತದೆ.11,400 ಮೆಟ್ರಿಕ್ ಟನ್ ಬೆಣ್ಣೆದಾಸ್ತಾನಿದೆ. ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಸುಮಾರು 800 ಕೋಟಿ ಆಗುತ್ತದೆ. ಮೇಲಾಗಿ ಜೂನ್‌ನಲ್ಲಿ ಹಾಲಿನಶೇಖರಣೆ ಒಂದು ಕೋಟಿ ಲೀಟರ್ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಇದನ್ನು ಎಲ್ಲಿ, ಯಾವ ರೀತಿ ಮಾರಾಟ ಮಾಡಬೇಕು ಎಂಬುದುಕೆಎಂಎಫ್‌ಗೆ ಸವಾಲಾಗಿ ಪರಿಣಮಿಸಿದೆ.
ಕಳೆದ ವರ್ಷ ಇದೇ ರೀತಿ ಅಪಾರ ಪ್ರಮಾಣದಲ್ಲಿ ಹಾಲು ಒಕ್ಕೂಟದಲ್ಲಿ ಹಾಲು ಉಳಿಯುತ್ತಿರುವಾಗಮಧ್ಯಪ್ರವೇಶಿಸಿದ್ದ ಸರ್ಕಾರ 80 ಕೋಟಿ ವೆಚ್ಚ ಮಾಡಿ ಒಂದು ತಿಂಗಳ ಕಾಲ 8 ಲಕ Ò ಲೀಟರ್ ಹಾಲು ಖರೀದಿ ಮಾಡಿ ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ನಿರಾಶ್ರಿತ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಪೂರೈಸಿತ್ತು. ಇದರಿಂದ ಹಾಲು ರಜೆ ಘೋಷಣೆ ತಪ್ಪಿತ್ತು. ಈಗಲೂ ಅದೇ ಮಾದರಿಯಲ್ಲಿ ಹಾಲು ಪುಡಿ ಖರೀದಿ ಮಾಡಿ ಮಕ್ಕಳಿಗೆ ನೀಡಬೇಕು ಎಂಬುದು ಒಕ್ಕೂಟಗಳ ಆಗ್ರಹ.
ನಷ್ಟದಲ್ಲಿ ಒಕ್ಕೂಟಗಳು :
2020-21ರಲ್ಲಿ ಕೋವಿಡ್ ಹಾವಳಿ ಮಧ್ಯೆಯೂ ಕೆಎಂಎಫ್ 170 ಕೋಟಿ ರೂ. ಲಾಭ ಮಾಡಿತ್ತು. ಆದರೆಈಗ 2ನೇ ಅಲೆಯಲ್ಲಿ ಲಾಭದ ಮಾತು ಮರೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಂದೊಂದೇ ಹಾಲು ಒಕ್ಕೂಟಗಳು ನಷ್ಟದ ಸುಳಿಗೆ ಸಿಲುಕುತ್ತಿವೆ. ಮುಂದೆಇದನ್ನು ಸರಿದೂಗಿಸುವುದು ಕಷ್ಟದ ಕೆಲಸ. ಇಷ್ಟಾದರೂ ರೈತರಿಗೆ ತೊಂದರೆಯಾಗಲು ಬಿಟ್ಟಿಲ್ಲ. ಅದೇ ಸಮಾಧಾನ ಎಂಬುದುಕೆಎಂಎಫ್ ಅಧಿಕಾರಿಗಳ ಹೇಳಿಕೆ.
ಕೊರೊನಾದ ಸಂದಿಗ್ಧ ಸಮಯದಲ್ಲಿ ಕೆಎಂಎಫ್ ಮತ್ತು ಹಾಲು ಒಕ್ಕೂಟಗಳ ಸ್ಥಿತಿ ಶೋಚನೀಯವಾಗಿದೆ. ನಿತ್ಯ ಸಂಗ್ರಹವಾಗುವ ದಾಖಲೆ ಪ್ರಮಾಣದ ಹಾಲು, ಅದರ ಮಾರಾಟ,ನಂತರ ಅದರಿಂದ ಹಾಲಿನ ಪುಡಿ ತಯಾರಿಸಿ ಮಾರುವುದುಕಷ್ಟಕರವಾಗಿದೆ. ಸರ್ಕಾರದ ನೆರವಿಗೆಮೊರೆ ಹೋಗಿದ್ದೇವೆ. ಜೂನ್ ಮತ್ತು ಜುಲೈನಲ್ಲಿ ರಾಜ್ಯದ 64 ಲಕ್ಷ ಮಕ್ಕಳಿಗೆ ಮನೆ ಮನೆಗೆ ಅರ್ಧಕೆಜಿ ಹಾಲಿನ ಪುಡಿ ಪೂರೈಕೆ ಮಾಡಬೇಕು. ಇದರಿಂದ 3,600 ಮೆಟ್ರಿಕ್ ಟನ್ ಹಾಲಿನ ಪುಡಿ ಖರ್ಚಾಗಲಿದೆ.
– ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ
-ಕೇಶವ ಆದಿ