Advertisement

ಗಂಡನಿಗಾಗಿ ಕಿಡ್ನಿ ದಾನ ಮಾಡಿದ ಪತ್ನಿ: ಅಪ್ಪ – ಅಮ್ಮನ ಸುಂದರ ಬಾಂಧವ್ಯವನ್ನು ಹಂಚಿಕೊಂಡ ಮಗ

01:53 PM Oct 23, 2022 | Team Udayavani |

ನವದೆಹಲಿ: ಜಗತ್ತಿನಲ್ಲಿ ನೂರಾರು ಪ್ರೇಮ ಕಥೆಗಳಿವೆ. ಪರಸ್ಪರ ನಂಬಿಕೆಯಿಂದ, ವಿಶ್ವಾಸದಿಂದ ಬದುಕಿ ಖುಷಿಯಾಗಿರುವುದು ದಾಂಪತ್ಯದ ಗುಟ್ಟು. ಅಪ್ಪ – ಅಮ್ಮನ ಸುಂದರವಾದ ಬಾಂಧವ್ಯದ ಕಥೆಯನ್ನು ಮಗನೊಬ್ಬ ಟ್ವಟಿರ್‌ ನಲ್ಲಿ ಹಂಚಿಕೊಂಡಿದ್ದಾನೆ.

Advertisement

ಅವರಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖ- ದು:ಖದಲ್ಲಿ ಭಾಗಿಯಾಗಿ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಗಂಡನಿಗೆ ವಯೋಸಹಜ ಅನಾರೋಗ್ಯ ಕಾಡಿದೆ. ಪತ್ನಿ ಇಂಥ ಸಮಯದಲ್ಲೂ ತನ್ನ ಗಂಡನ ಜೊತೆಯೇ ಇದ್ದು, ಆರೈಕೆ, ಒಳಿತಿಗೆ ಹಾರೈಕೆ ಮಾಡುತ್ತಾ ಬಯಸುತ್ತಾ ಬಂದಿದ್ದಾರೆ.

ಟ್ವಟರ್‌ ನಲ್ಲಿ ಅಪ್ಪ – ಅಮ್ಮನ ಈ ಬಾಂಧವ್ಯವನ್ನು ಮಗನಾದ ಲಿಯೋ ಹಂಚಿಕೊಂಡಿದ್ದಾರೆ. ಅಪ್ಪ 98 ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರೊಂದಿಗೆ ಅಮ್ಮ ದಿನನಿತ್ಯ ವಾರದಲ್ಲಿ 3 ದಿನ 5-6 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಕಾಯುತ್ತಿದ್ದರು. ಆ ಬಳಿಕ ಅಮ್ಮ ಅಪ್ಪನನ್ನು ಉಳಿಸಲು ಅವರ ಕಿಡ್ನಿಯನ್ನು ದಾನ ಮಾಡಿದರು. ಈಗ ಇಬ್ಬರು ಆರೋಗ್ಯವಾಗಿದ್ದಾರೆ. ನನಗೆ ಇದಕ್ಕಿಂತ ಒಳ್ಳೆಯ ಪ್ರೇಮ ಕಥೆ ತಿಳಿದಿಲ್ಲ ಎಂದು ಆಸ್ಪತ್ರೆ ಕೋಣೆಯ ಹೊರ ನೋಟ ಹಾಗೂ ತನ್ನ ಅಪ್ಪ ಅಮ್ಮನ ಸುಂದರವಾದ ನಗುವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗದ್ದು, ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿ, ಇಬ್ಬರ ಪ್ರೀತಿಗೆ ಕಮೆಂಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next