Advertisement

Kidney Diseases: ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳು

03:01 PM Apr 05, 2024 | Team Udayavani |

ನಮ್ಮ ಒಟ್ಟಾರೆ ದೇಹಾರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ಅನೇಕ ಕಾರ್ಯಗಳನ್ನು ಮೂತ್ರಪಿಂಡಗಳು ನಿರ್ವಹಿಸುತ್ತವೆ. ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಸ್ತುಗಳು, ಹೆಚ್ಚುವರಿ ಉಪ್ಪಿನಂಶ ಮತ್ತು ದ್ರವಾಂಶಗಳನ್ನು ಶೋಧಿಸಿ ಮೂತ್ರದ ರೂಪದಲ್ಲಿ ದೇಹದಿಂದ ಹೊರಹಾಕುವುದು ಮೂತ್ರಪಿಂಡಗಳ ಮುಖ್ಯ ಕಾರ್ಯ.

Advertisement

ದೇಹದಲ್ಲಿ ನೀರಿನಂಶ, ಆಮ್ಲ-ಪ್ರತ್ಯಾಮ್ಲ, ಸೋಡಿಯಂ, ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂನಂತಹ ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಕೂಡ ಮೂತ್ರಪಿಂಡಗಳು. ದೇಹದಲ್ಲಿ ಇರಬೇಕಾದ ರಕ್ತದ ಪ್ರಮಾಣ ಮತ್ತು ದೇಹದಲ್ಲಿ ಇರಬೇಕಾದ ಉಪ್ಪಿನಂಶದ ಪ್ರಮಾಣವನ್ನು ನಿಯಂತ್ರಿಸುವ ನಿರ್ಣಾಯಕ ಹೊಣೆಗಾರಿಕೆಯನ್ನು ಕೂಡ ಮೂತ್ರಪಿಂಡಗಳೇ ನಿರ್ವಹಿಸುತ್ತವೆ.

ರಕ್ತದಲ್ಲಿ ಹಿಮೊಗ್ಲೊಬಿನ್‌ ಮಟ್ಟವನ್ನು ಹೆಚ್ಚಿಸುವುದಕ್ಕೆ ಮಲ ವಿಸರ್ಜನೆಯ ಅಭ್ಯಾಸ ಆರೋಗ್ಯಪೂರ್ಣವಾಗಿ, ಚೆನ್ನಾಗಿ ಆಗುವುದು ನಾವು ಚೆನ್ನಾಗಿರುವ ಅನುಭವ ಹೊಂದುವುದಕ್ಕೆ ಬಹಳ ಮುಖ್ಯ. ಮಲ ವಿಸರ್ಜನೆಯ ಅಭ್ಯಾಸವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಕೆಲವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆ ಮಾಡಬಹುದು; ಇನ್ನು ಕೆಲವರಿಗೆ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮಲ ವಿಸರ್ಜನೆ ಆಗಬಹುದು. ಆದ್ದರಿಂದ ನಮಗೆ ಯಾವುದು ಸಹಜ ಎಂಬುದನ್ನು ಮೊತ್ತಮೊದಲಾಗಿ ತಿಳಿದುಕೊಳ್ಳುವುದು ಮುಖ್ಯ. ಒಬ್ಬ ವ್ಯಕ್ತಿಗೆ “ಸಹಜ’ವಾದ ಮಲವಿಸರ್ಜನೆಯ ಅಭ್ಯಾಸ ಇನ್ನೊಬ್ಬ ವ್ಯಕ್ತಿಗೆ “ಅಸಹಜ’ ಆಗಿರಬಹುದು.

ಮಲಬದ್ಧತೆ ಎಂದರೇನು?

Advertisement

ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಬಹಳ ಸಾಮಾನ್ಯವಾದುದು ಮಲಬದ್ಧತೆ. ಯಾವುದೇ ವಯಸ್ಸಿನವರಲ್ಲಿ ಇದು ಉಂಟಾಗಬಹುದು. ಸಾಮಾನ್ಯಕ್ಕಿಂತ ಕಡಿಮೆ ಸಲ (ವಾರಕ್ಕೆ 3ಕ್ಕಿಂತ ಕಡಿಮೆ ಬಾರಿ) ಮಲ ವಿಸರ್ಜನೆ ಆಗುವುದಾದರೆ ಅದನ್ನು ಮಲಬದ್ಧತೆ ಎನ್ನಲಾಗುತ್ತದೆ. ಮಲವನ್ನು ವಿಸರ್ಜಿಸಲು ಕಷ್ಟವಾದಾಗಲೂ ಅದನ್ನು ಮಲಬದ್ಧತೆ ಎನ್ನಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಲವು ಗಟ್ಟಿ, ಒಣ ಹಾಗೂ ಅಸಹಜವಾಗಿ ದೊಡ್ಡ ಅಥವಾ ಸಣ್ಣ ಗಾತ್ರದಲ್ಲಿ ಇರುತ್ತದೆ.

ಮಲಬದ್ಧತೆಗೆ ಕಾರಣಗಳೇನು? ­

ಆಹಾರಾಭ್ಯಾಸದಲ್ಲಿ ಬದಲಾವಣೆ ಅಥವಾ ಆಹಾರ ಸೇವನೆಯ ಕ್ರಮದಲ್ಲಿ ಬದಲಾವಣೆಯಂತಹ ದೈನಿಕ ಅಥವಾ ಜೀವನ ಶೈಲಿ ಪರಿವರ್ತನೆಗಳು ­ ನಾರಿನಂಶ ಕಡಿಮೆ ಇರುವ ಆಹಾರ ಕ್ರಮ­ ನಿರ್ಜಲತೆ – ಅಗತ್ಯವಿರುವಷ್ಟು ನೀರು, ದ್ರವಾಹಾರ ಸೇವಿಸದೆ ಇರುವುದು ­ ಕೆಲವು ನಿರ್ದಿಷ್ಟ ಔಷಧಗಳು ­ ಒತ್ತಡ, ಆತಂಕ ಅಥವಾ ಖನ್ನತೆ ­ ಚಲನಶೀಲತೆ ಅಥವ ಅಥವಾ ದೈಹಿಕ ಚಟುವಟಿಕೆಗಳ ಕೊರತೆ ಮಲಬದ್ಧತೆಯನ್ನು ನಿಭಾಯಿಸಲು ಸಾಮಾನ್ಯ ಆಹಾರಾಭ್ಯಾಸ/ ಜೀವನ ಶೈಲಿ ಸಲಹೆಗಳು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ನಿಮಗೆ ಅಭ್ಯಾಸವಾಗಿರುವ ಸಮಯಕ್ಕೆ ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳು ಬೇಕಾದ ಎರಿತ್ರೊಪೊಯೆಟಿನ್‌ನಂತಹ ಹಾರ್ಮೋನ್‌ಗಳು ಹಾಗೂ ಎಲುಬುಗಳ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸಮತೋಲನವನ್ನು ಕಾಪಾಡಿಕೊಳ್ಳಲು ಬೇಕಾದ ಸಕ್ರಿಯ ವಿಟಮಿನ್‌ ಡಿಗಳನ್ನು ಮೂತ್ರಪಿಂಡಗಳು ಉತ್ಪಾದಿಸುತ್ತವೆ.

ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳು ಹೆಚ್ಚು ಪರಿಗಣನೆಗೆ ಬಾರದ ಕ್ಷೇತ್ರವಾಗಿದೆ. ರೋಗಶಾಸ್ತ್ರೀಯತೆಯ ಸಹಿತ ಮಕ್ಕಳ ಮೂತ್ರಪಿಂಡಗಳು ವಯಸ್ಕರ ಮೂತ್ರಪಿಂಡಗಳಿಗಿಂತ ಭಿನ್ನವಾಗಿದ್ದು, ಅವುಗಳನ್ನು ಬಾಧಿಸುವ ಅನಾರೋಗ್ಯಗಳ ಸಮೂಹ ಮಕ್ಕಳ ಮೂತ್ರಪಿಂಡ ಕಾಯಿಲೆಗಳಲ್ಲಿ ಸೇರುತ್ತವೆ.

ಇದು ರೋಗಿ ಮಗುವಿನ ಆರೋಗ್ಯದ ಮೇಲೆ ಬಾಲ್ಯಕಾಲದಲ್ಲಿ ಪ್ರತಿಕೂಲ ಪರಿಣಾಮ ಬೀರುವುದು ಮಾತ್ರವಲ್ಲದೆ ಮಗು ಮುಂದೆ ವಯಸ್ಕನಾದ ಸಂದರ್ಭ ಆ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ ರೋಗಿ ಮಗು ಮತ್ತು ಕುಟುಂಬದ ಮೇಲೆ ಅಪಾರವಾದ ಮಾನಸಿಕ ಪರಿಣಾಮವನ್ನು ಹೊಂದಿರುತ್ತದೆ. ಇಂತಹ ಮಕ್ಕಳ ಹೆತ್ತವರು ಹೆತ್ತವರಾಗಿ ತಮ್ಮ ಪಾತ್ರವನ್ನು ನಿಭಾಯಿಸುವುದರ ಜತೆಗೆ ವೈದ್ಯರು ಮತ್ತು ದಾದಿಯರು ನಿರ್ವಹಿಸಬೇಕಾದ ಅನೇಕ ಕಾರ್ಯಗಳನ್ನು ಕೂಡ ನಡೆಸಬೇಕಾಗುತ್ತದೆ.

ರೋಗಪತ್ತೆ ಉತ್ತಮಗೊಂಡಿರುವುದು ಮತ್ತು ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸಾಕ್ರಮಗಳು ಅಭಿವೃದ್ಧಿ ಹೊಂದಿರುವುದರಿಂದಾಗಿ ಪ್ರಾಣಾಪಾಯದಿಂದ ಪಾರಾಗುವ ಪ್ರಮಾಣ ಹೆಚ್ಚಿರುವುದರಿಂದ ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳ ಉಪಸ್ಥಿತಿ ಮತ್ತು ಪತ್ತೆಯೂ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಳವಾಗಿದೆ. ಪ್ರತೀ ದಶಲಕ್ಷ ವಯೋಸಂಬಂಧಿ ಜನಸಮೂಹ (ಪಿಎಂಆರ್‌ಪಿ)ದಲ್ಲಿ 120ರಿಂದ 160ರಷ್ಟು ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳು ಕಂಡುಬರುತ್ತಿವೆ.

ಅಭಿವೃದ್ಧಿಶೀಲ ದೇಶಗಳಲ್ಲಿ ದೀರ್ಘ‌ಕಾಲೀನ ಮೂತ್ರಪಿಂಡ ಕಾಯಿಲೆಗಳ ನೈಜ ಪರಿಣಾಮಗಳು ಹೆಚ್ಚಾಗಿ ದಾಖಲೀಕರಣಗೊಳ್ಳುವುದು ಕಡಿಮೆ. ಮಕ್ಕಳ ಮೂತ್ರಪಿಂಡ ಆರೈಕೆ ಸೌಲಭ್ಯಗಳ ಕೊರತೆ, ಮೂತ್ರಪಿಂಡ ಕಸಿ ಚಿಕಿತ್ಸೆಯ ಅಲಭ್ಯತೆ, ಕೈಗೆಟಕದಿರುವಿಕೆ ಮತ್ತು ಆರೋಗ್ಯ ಸೇವಾ ಸಂಪನ್ಮೂಲಗಳ ಕಳಪೆ ಲಭ್ಯತೆ ಇದಕ್ಕೆ ಕಾರಣ.

ಮಕ್ಕಳಲ್ಲಿ ಮೂತ್ರಪಿಂಡ ಕಾಯಿಲೆಗಳು ಜನ್ಮಜಾತ ತೊಂದರೆಗಳು, ಮೂತ್ರಪಿಂಡ ಬೆಳವಣಿಗೆಯಲ್ಲಿ ಅಸಹಜತೆಗಳು, ಆನುವಂಶಿಕ ವಂಶವಾಹಿ ಕಾಯಿಲೆಗಳು, ಸೋಂಕುಗಳಿಂದಾಗಿ ತಲೆದೋರಿದ ಕಾಯಿಲೆಗಳು, ಆಟೊಇಮ್ಯೂನಿಟಿ ಅಥವಾ ಔಷಧಗಳ ಪರಿಣಾಮಗಳಿಂದಾಗಿ ಉಂಟಾದ ಸಮಸ್ಯೆಗಳು ಹಾಗೂ ಅಪರೂಪಕ್ಕೆ ಮೂತ್ರಪಿಂಡಗಳು ಮತ್ತು ಮೂತ್ರಾಂಗ ವ್ಯೂಹದ ಕ್ಯಾನ್ಸರ್‌ಗಳನ್ನು ಒಳಗೊಂಡಿರುತ್ತವೆ.

ಇವುಗಳ ಲಕ್ಷಣಗಳು ನಿರ್ದಿಷ್ಟ ಮೂತ್ರಪಿಂಡ ಕಾಯಿಲೆಯನ್ನು ಆಧರಿಸಿ ಬದಲಾಗಬಹುದು; ಆದರೆ ಕೆಲವು ಸಾಮಾನ್ಯ ಲಕ್ಷಣಗಳು ಎಂದರೆ: ­

  • ದೇಹದಲ್ಲಿ ದ್ರವಾಂಶ ಉಳಿಯುವಿಕೆ: ಕಾಲುಗಳು, ಪಾದ, ಮಣಿಗಂಟು, ಮುಖ ಊದಿಕೊಳ್ಳುವಿಕೆ, ಹಾಸಿಗೆಯಲ್ಲಿ ಮೂತ್ರವಿಸರ್ಜನೆ (ವಿಶೇಷವಾಗಿ ಮಗು ರಾತ್ರಿ ನೀರು ಕುಡಿಯದೆ ಇದ್ದರೂ), ನೊರೆಸಹಿತ ಅಥವಾ ರಕ್ತಸಹಿತ ಮೂತ್ರ ವಿಸರ್ಜನೆ. ­
  • ದಣಿವು: ದೇಹ ದೌರ್ಬಲ್ಯ, ಆಲಸ್ಯ ಅಥವಾ ಸುಲಭವಾಗಿ ಕಿರಿಕಿರಿಗೆ ಒಳಗಾಗುವುದು. ­
  • ಹಸಿವು ಕಡಿಮೆ: ಹೊಟ್ಟೆ ತೊಳೆಸುವಿಕೆ, ವಾಂತಿ ಅಥವಾ ತೂಕ ನಷ್ಟ. ­
  • ಅಧಿಕ ರಕ್ತದೊತ್ತಡ: ಸ್ವಲ್ಪ ದೊಡ್ಡ ಮಕ್ಕಳು ಮತ್ತು ಹದಿಹರಯದವರಲ್ಲಿ ಇದು ಹೆಚ್ಚು ಸಾಮಾನ್ಯ. ­
  • ಬೆಳವಣಿಗೆಯ ಸಮಸ್ಯೆಗಳು: ವಿಳಂಬವಾದ ಬೆಳವಣಿಗೆ ಅಥವಾ ಕುಬ್ಜತೆ. ­
  • ನೋವು: ಹೊಟ್ಟೆಯ ಭಾಗದಲ್ಲಿ ನೋವು, ಬೆನ್ನುನೋವು ಅಥವಾ ವಪೆಯ ಭಾಗದಲ್ಲಿ ನೋವು.

ಈ ಮೇಲೆ ಹೇಳಲಾಗಿರುವ ಲಕ್ಷಣಗಳು ಇತರ ಅನಾರೋಗ್ಯಗಳಿಂದಾಗಿಯೂ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಮಗು ಮೂತ್ರಪಿಂಡ ಕಾಯಿಲೆಗೆ ತುತ್ತಾಗಿದೆ ಎಂಬ ಸಂದೇಹ ಉಂಟಾದರೆ ಮಕ್ಕಳ ತಜ್ಞರು ಅಥವಾ ಮಕ್ಕಳ ಮೂತ್ರಪಿಂಡ ತಜ್ಞರ ಜತೆಗೆ ಸಮಾಲೋಚನೆ ನಡೆಸಿ ಸರಿಯಾದ ತಪಾಸಣೆ, ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ. ಆದಷ್ಟು ಬೇಗನೆ ಮೂತ್ರಪಿಂಡ ಕಾಯಿಲೆಯನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಿದರೆ ಚಿಕಿತ್ಸೆಯ ಫ‌ಲಿತಾಂಶ ಉತ್ತಮಗೊಳ್ಳುವುದು ಸಾಧ್ಯ.

-ಡಾ| ದರ್ಶನ್‌ ರಂಗಸ್ವಾಮಿ,

ಕನ್ಸಲ್ಟಂಟ್‌,

ಪೀಡಿಯಾಟ್ರಿಕ್‌ ನೆಫ್ರಾಲಜಿ ವಿಭಾಗ,

ಕೆಎಂಸಿ ಆಸ್ಪತ್ರೆ,

ಮಣಿಪಾಲ ಮತ್ತು ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪೀಡಿಯಾಟ್ರಿಕ್‌ ನೆಫ್ರಾಲಜಿ ವಿಭಾಗ, ಎಂಸಿಡಿಒಎಸ್‌, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next