ನವದೆಹಲಿ: ಜಗತ್ತಿನಲ್ಲಿ ನೂರಾರು ಪ್ರೇಮ ಕಥೆಗಳಿವೆ. ಪರಸ್ಪರ ನಂಬಿಕೆಯಿಂದ, ವಿಶ್ವಾಸದಿಂದ ಬದುಕಿ ಖುಷಿಯಾಗಿರುವುದು ದಾಂಪತ್ಯದ ಗುಟ್ಟು. ಅಪ್ಪ – ಅಮ್ಮನ ಸುಂದರವಾದ ಬಾಂಧವ್ಯದ ಕಥೆಯನ್ನು ಮಗನೊಬ್ಬ ಟ್ವಟಿರ್ ನಲ್ಲಿ ಹಂಚಿಕೊಂಡಿದ್ದಾನೆ.
ಅವರಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಖ- ದು:ಖದಲ್ಲಿ ಭಾಗಿಯಾಗಿ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಗಂಡನಿಗೆ ವಯೋಸಹಜ ಅನಾರೋಗ್ಯ ಕಾಡಿದೆ. ಪತ್ನಿ ಇಂಥ ಸಮಯದಲ್ಲೂ ತನ್ನ ಗಂಡನ ಜೊತೆಯೇ ಇದ್ದು, ಆರೈಕೆ, ಒಳಿತಿಗೆ ಹಾರೈಕೆ ಮಾಡುತ್ತಾ ಬಯಸುತ್ತಾ ಬಂದಿದ್ದಾರೆ.
ಟ್ವಟರ್ ನಲ್ಲಿ ಅಪ್ಪ – ಅಮ್ಮನ ಈ ಬಾಂಧವ್ಯವನ್ನು ಮಗನಾದ ಲಿಯೋ ಹಂಚಿಕೊಂಡಿದ್ದಾರೆ. ಅಪ್ಪ 98 ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಬೇಕಾಯಿತು. ಅವರೊಂದಿಗೆ ಅಮ್ಮ ದಿನನಿತ್ಯ ವಾರದಲ್ಲಿ 3 ದಿನ 5-6 ಗಂಟೆಗಳ ಕಾಲ ಆಸ್ಪತ್ರೆಯಲ್ಲೇ ಕಾಯುತ್ತಿದ್ದರು. ಆ ಬಳಿಕ ಅಮ್ಮ ಅಪ್ಪನನ್ನು ಉಳಿಸಲು ಅವರ ಕಿಡ್ನಿಯನ್ನು ದಾನ ಮಾಡಿದರು. ಈಗ ಇಬ್ಬರು ಆರೋಗ್ಯವಾಗಿದ್ದಾರೆ. ನನಗೆ ಇದಕ್ಕಿಂತ ಒಳ್ಳೆಯ ಪ್ರೇಮ ಕಥೆ ತಿಳಿದಿಲ್ಲ ಎಂದು ಆಸ್ಪತ್ರೆ ಕೋಣೆಯ ಹೊರ ನೋಟ ಹಾಗೂ ತನ್ನ ಅಪ್ಪ ಅಮ್ಮನ ಸುಂದರವಾದ ನಗುವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗದ್ದು, ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿ, ಇಬ್ಬರ ಪ್ರೀತಿಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.