Advertisement

ಬೆಂಗಳೂರು: 70 ರ ಮುದುಕನಿಂದ 8 ಬಾಲಕಿಯ ರೇಪ್‌ 

11:53 AM Sep 20, 2017 | Team Udayavani |

ಬೆಂಗಳೂರು:70 ವರ್ಷದ ಮುದುಕನೊಬ್ಬ ಕಾಮಾಂಧನಾಗಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಹೇಯ, ಕಳವಳಕಾರಿ ಘಟನೆ ವಿಜಯನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. 

Advertisement

ಶಾಲೆಗೆ ರಜೆಯಿದ್ದ ಕಾರಣ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದಳು, ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಕಾಮುಕ ವೃದ್ಧ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. . 

 ಪೋಷಕರು ಸಂಜೆಗೆ ಮನೆಗೆ ಬಂದಾಗ ಬಾಲಕಿ ಘಟನೆಯ ಬಗ್ಗೆ ತಿಳಿಸಿದ್ದು, ಕೂಡಲೇ ವಿಜಯನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೋಕ್ಸೋ ಕಾಯಿದೆ ಅಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next