Advertisement
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಕಳೆದ ಬಾರಿಗಿಂತ ಅಧಿಕ ಸೀಟುಗಳನ್ನು ಗೆಲ್ಲಲು ಮಹಾರಾಷ್ಟ್ರ ಬಿಜೆಪಿ ವರಿಷ್ಠರಿಗೆ ಸೂಚಿಸಿದ್ದು, ಇಲ್ಲಿಯವರೆಗೆ ಫಡ್ನವೀಸ್ ಅವರು 31 ಸೀಟುಗಳ ಚುನಾವಣ ಪ್ರಚಾರಕ್ಕಾಗಿ 70 ರ್ಯಾಲಿಗಳನ್ನು ನಡೆಸಿ ಕೇಂದ್ರದ ಮೋದಿ ಸರಕಾರ ಮತ್ತು ರಾಜ್ಯ ಬಿಜೆಪಿ-ಶಿವಸೇನೆ ಸರಕಾರದ ಜನಪರ ಯೋಜನೆಗಳನ್ನು ಜನತೆಯ ಮನ-ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎ. 29 ರಂದು 17 ಸೀಟುಗಳಿಗಾಗಿ 4ನೇ ಹಂತದ ಚುನಾವಣೆ ನಡೆಯಲಿದ್ದು, ಎ. 27ರಂದು ಚುನಾವಣ ಪ್ರಚಾರಕ್ಕೆ ತೆರೆ ಬೀಳಲಿದೆ. ಅಲ್ಲಿಯವರೆಗೆ ಫಡ್ನವೀಸ್ ಅವರು 100ಕ್ಕೂ ಅಧಿಕ ರ್ಯಾಲಿಗಳಲ್ಲಿ ಭಾಗವಹಿಸಿ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫಡ್ನವೀಸ್ ದಿನಂಪ್ರತಿ ಬೆಳಗ್ಗೆಯಿಂದ ಸಂಜೆಯವರೆಗೆ ರಾಜ್ಯದ ವಿವಿಧೆಡೆಗಳಲ್ಲಿ ಪ್ರಚಾರ ರ್ಯಾಲಿಗಳಲ್ಲಿ ಪಾಲ್ಗೊಂಡರೆ, ರಾತ್ರಿಯ ಹೊತ್ತು ತಮ್ಮ ವರ್ಷಾ ಬಂಗ್ಲೆಯಲ್ಲಿ ಪಕ್ಷದ ನೇತಾರರೊಂದಿಗೆ ಸಭೆಯಲ್ಲಿ ಬ್ಯುಸಿಯಾಗಿ ದ್ದಾರೆ. ಮುಖ್ಯಮಂತ್ರಿಗಳ ಚುನಾವಣ ಜವಾಬ್ದಾರಿ ಎಷ್ಟಿದೆ ಎಂದರೆ ದಿನದಲ್ಲಿ 3-4 ಚುನಾವಣ ಪ್ರಚಾರ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ. ರಾತ್ರಿ 2 ಗಂಟೆಯವರೆಗೂ ಪಕ್ಷದ ನೇತಾರರೊಂದಿಗೆ ಮಹತ್ವದ ಸಭೆ ಯನ್ನು ನಡೆಸಿ ಚರ್ಚೆಯನ್ನು ಮಾಡಲಾಗುತ್ತಿದೆ. ಬೆಳಗ್ಗೆ ಮತ್ತೆ ಅದೇ ರಾಗ ಎಂಬಂತೆ ರ್ಯಾಲಿಯಲ್ಲಿ ಮುಖ್ಯಮಂತ್ರಿಗಳು ನಿರತರಾಗಿ ಪಕ್ಷದ ಗೆಳುವಿಗಾಗಿ ಶ್ರಮಿಸುತ್ತಿದ್ದಾರೆ.
Related Articles
ಬಿಜೆಪಿಯು ಹೊರಡಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಮೊದಲಿಗಿರುವುದು ವಿಶೇಷವಾಯಾಗಿದೆ. ರಾಜ್ಯದ ಗಡಿcರೋಳಿಯಿಂದ ಹಿಡಿದು ವಾರ್ಧಾ, ನಾಗ್ಪುರ, ಭಂಡಾರ, ಗೋಂಡಿಯಾ, ಬುಲಾzಣ, ಅಮರಾವತಿ, ನಾಂದೇಡ್, ಉಸ್ಮನಾಬಾದ್, ಸಾಂಗ್ಲಿ, ಸತಾರ, ಲಾತೂರ್, ಮಾಡಾ, ಕೊಲ್ಲಾಪುರ ಸೇರಿದಂತೆ ಪ್ರಥಮ, ದ್ವಿತೀಯ, ತೃತೀಯ ಹಂತದಲ್ಲಿ ನಡೆಯಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಫಡ್ನವೀಸ್ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಫಡ್ನವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಭಾಗವಹಿಸಿದ ಎಲ್ಲ ರ್ಯಾಲಿಗಳಲ್ಲಿ ಪ್ರಮುಖರಾಗಿದ್ದರು. ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ಹಿಡಿದು ಎಲ್ಲ ಆಯಾಯ ಕ್ಷೇತ್ರಗಳ ಚುನಾವಣ ಪ್ರಚಾರಕ್ಕೆ ಸಂಬಂಧಿಸಿ ಫಡ್ನವೀಸ್ ಅವರ ನೇತೃತ್ವದಲ್ಲೇ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷ ಎನ್ನಬಹುದು.
Advertisement
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯದಲ್ಲೇ ಬಿಜೆಪಿಯ ಅತ್ಯಂತ ಪ್ರಸಿದ್ಧಿಯ ನೇತಾರರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಜಯ ಗಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ರ್ಯಾಲಿಗಳನ್ನು ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳ ಎಲ್ಲಾ ರ್ಯಾಲಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು, ಇದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂಬುಂದಕ್ಕೆ ನಿದರ್ಶನವಾಗಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ-ಶಿವಸೇನೆ ಮೈತ್ರಿ ಪಕ್ಷಗಳು ಪಡೆಯುವುದರಲ್ಲಿ ಸಂಶಯವಿಲ್ಲ.– ಕೇಶವ ಉಪಾಧ್ಯೆ,ಬಿಜೆಪಿ ಪ್ರದೇಶ ಪ್ರವರ್ತಕ ಫಡವೀಸ್ ಅವರ ಭ್ರಷ್ಟಾಚಾರ ಮುಕ್ತ ಸರಕಾರ ಮತ್ತು ವಿಕಾಸ ಕಾರ್ಯಗಳಿಂದ ಜನರು ಪ್ರೇರಿತರಾಗಿ ಅವರ ಭಾಷಣವನ್ನು ಕೇಳಲು ಮುಗಿಬೀಳುತ್ತಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್-ಎನ್‌ಸಿಪಿಯ ಯಾವುದೇ ನಾಯಕರು ಚುನಾವಣೆಗಾಗಿ ಇಷ್ಟೊಂದು ಪ್ರಚಾರದಲ್ಲಿ ತೊಡಗಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ. ಇದರಿಂದ ಬಿಜೆಪಿಗೆ ಬಹಳಷ್ಟು ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಫಲಿತಾಂಶ ಮುಂದಿನ ದಿನಗಳಲ್ಲಿ ತಿಳಿಯಲಿದೆ.
– ಮೋಹಿತ್ ಭಾರತೀಯ,ಅಧ್ಯಕ್ಷರು, ಮುಂಬಯಿ ಬಿಜೆಪಿ ಉತ್ತರ ಭಾರತೀಯ ಮೋರ್ಚಾ