Advertisement
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ಯಾವುದೇ ಕ್ಷೇತ್ರದಲ್ಲಿ ಉನ್ನತ ಯಶಸ್ಸು ಕಂಡ ವ್ಯಕ್ತಿ ಯನ್ನು ನಾನು ಗೌರವ ದಿಂದ ಕೇಳುತ್ತೇನೆ, ನನ್ನ ಹೇಳಿಕೆಯಲ್ಲಿ ಏನಾದ ರೂ ತಪ್ಪಿದೆಯೇ ಎಂದು. ಆದರೆ ನನ್ನ ಸಲಹೆಗೆ ವೈಯಕ್ತಿಕವಾಗಿ ನನಗೆ ಯಾವುದೇ ನಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ” ಎಂದರು. “ಸ್ವತಃ ನಾನು ಇದನ್ನು ಪಾಲಿಸಿದ್ದರಿಂದ ಈ ಸಲಹೆ ನೀಡಿದ್ದೇನೆ. ನನ್ನ ಸಲಹೆ ಕುರಿತು ನನ್ನ ವಿದೇಶಿ ಸ್ನೇಹಿತರು, ಎನ್‌ಆರ್‌ಐಗಳು ಹಾಗೂ ಭಾರತದಲ್ಲಿ ಅನೇಕ ರು ಮೆಚ್ಚುಗೆ ವ್ಯಕ್ತಪಡಿ ಸಿದ್ದಾರೆ’ ಎಂದು ಹೇಳಿದರು. “ಈಗಲು ನಮ್ಮ ದೇಶದಲ್ಲಿ ರೈತರು, ಕೈಗಾರಿಕೆ ಗಳಲ್ಲಿ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ತಮ್ಮ ಆರ್ಥಿಕ ಮಟ್ಟದಿಂದ ಮೇಲಕ್ಕೇರಲು ಶ್ರಮಿಸುತ್ತಾರೆ,’ ಎಂದರು.
“ಇನ್ಫೋಸಿಸ್ ಕಂಪೆನಿಯಲ್ಲಿ ಪತ್ನಿ ಸುಧಾ ಮೂರ್ತಿ ಅವರನ್ನು ಸೇರಿಸಿಕೊಳ್ಳದೇ ತಪ್ಪು ಮಾಡಿದೆ ಎಂದು ನನಗೆ ಈಗ ಅನಿಸುತ್ತಿದೆ’ ಎಂದು ಮೂರ್ತಿ ಹೇಳಿದರು. “ಕಂಪೆನಿಯಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರ ದೆಂದು ಆಗ ನನ್ನ ತತ್ವವಾಗಿತ್ತು. ಇನ್ಫೋಸಿಸ್‌ನ ಎಲ್ಲ ಸಂಸ್ಥಾಪಕರಿಗಿಂತಲು ಸುಧಾ ಹೆಚ್ಚು ಅರ್ಹರಾಗಿದ್ದರು. ಅಂದು ನಾನು ನಂಬಿದ್ದ ಆದರ್ಶಕ್ಕೆ ಒತ್ತು ಕೊಟ್ಟು ಸುಧಾರನ್ನು ದೂರವಿಟ್ಟೆ. ಆದರೆ, ಅರ್ಹತೆ ಇರುವ ಯಾರಿಗಾದರೂ ಸೂಕ್ತ ಸ್ಥಾನ ನೀಡಬೇಕೆಂದು ಅನಂತರ ಅರ್ಥವಾಯಿತು ಎಂದರು.