Advertisement

ಮಹಾರಾಷ್ಟ್ರದಿಂದ ಲಕ್ನೋಗೆ ತೆರಳಿದ್ದ 7 ಮಂದಿ ವಲಸೆ ಕಾರ್ಮಿಕರಲ್ಲಿ ಕೋವಿಡ್ 19 ಸೋಂಕು ಪತ್ತೆ

08:15 AM May 03, 2020 | Nagendra Trasi |

ಲಕ್ನೋ: ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ವಿವಿಧ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ತಮ್ಮ ರಾಜ್ಯಗಳಿಗೆ ತೆರಳಬಹುದು ಎಂದು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಹಾರಾಷ್ಟ್ರದಿಂದ ಉತ್ತರಪ್ರದೇಶಕ್ಕೆ ವಾಪಸ್ ಆಗಿದ್ದ ಏಳು ಮಂದಿ ದಿನಗೂಲಿ ನೌಕರರಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದೆ.

Advertisement

ಪೂರ್ವ ಉತ್ತರಪ್ರದೇಶ ಬಸ್ತಿ ಜಿಲ್ಲೆಯ ಕಾರ್ಮಿಕರಾಗಿದ್ದು, ಮಹಾರಾಷ್ಟ್ರದಿಂದ ಲಕ್ನೋಗೆ ಆಗಮಿಸಿದ್ದ ನಂತರ ಅವರನ್ನು ಕಾಲೇಜ್ ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇದೀಗ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪತ್ತೆ ಹಚ್ಚಿ ಐಸೋಲೇಶನ್ ನಲ್ಲಿ ಇಡಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ ಡೌನ್ ಜಾರಿ ಎಂದು ಘೋಷಿಸಿದ್ದರು. ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಸಿಕ್ಕಿಹಾಕೊಂಡಿದ್ದರು. ಈವರೆಗೆ ದೇಶದಲ್ಲಿ ಕೋವಿಡ್ 19 ಸೋಂಕು ತಗುಲಿದವರ ಸಂಖ್ಯೆ 37 ಸಾವಿರಕ್ಕೆ ತಲುಪಿದೆ, ಸಾವನ್ನಪ್ಪಿದವರ ಸಂಖ್ಯೆ 1,200ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next