ಮಹಾಲಿಂಗಪುರ : ಕೆಲವು ತಿಂಗಳುಗಳಿಂದ ಪಟ್ಟಣದಲ್ಲಿ ಯಾವುದೇ ಕೊರೊನಾ ಕೇಸ್ ಪತ್ತೆಯಾಗಿರಲಿಲ್ಲ. ಆದರೆ ಇಂದು ಪಟ್ಟಣದ ಹೃದಯಭಾಗದಲ್ಲಿರುವ ಕೆಜಿಎಸ್ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ 7 ವಿದ್ಯಾರ್ಥಿಗಳಿಗೆ ಕೊರೊನಾ ಪಾಜಿಟೀವ್ ದೃಢಪಟ್ಟಿದೆ. ಈ ಮೂಲಕ ಮಹಾಲಿಂಗಪುರ ಪಟ್ಟಣದಲ್ಲಿ ಕೊರೊನಾ 2 ನೇ ಅಲೆಯ ಕಂಟಕ ಮತ್ತೆ ಪ್ರಾರಂಭವಾದಂತಾಗಿದೆ.
ಕಳೆದ ಮಾರ್ಚ್ 26 ರಂದು ವಸತಿ ಶಾಲೆಯ 117 ವಿದ್ಯಾರ್ಥಿಗಳಲ್ಲಿ 115 ವಿದ್ಯಾರ್ಥಿಗಳ ಗಂಟಲು ದ್ರವ ಪಡೆದು ಕೊರೊನಾ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಮುಂಜಾನೆ 115 ಜನ ವಿದ್ಯಾರ್ಥಿಗಳ ಕೊವಿಡ್ ವರದಿ ಬಂದಿದ್ದು ಅದರಲ್ಲಿ 2 ವಿದ್ಯಾರ್ಥಿನಿಯರು, 5 ವಿದ್ಯಾರ್ಥಿಗಳು ಸೇರಿ 7 ಮಕ್ಕಳಿಗೆ ಕೊರೊನಾ ಪಾಜಿಟೀವ್ ದೃಢಪಟ್ಟಿದೆ. ಇಬ್ಬರು ವಿದ್ಯಾರ್ಥಿನಿಯರನ್ನು ಒಂದು ಕೊಠಡಿ ಹಾಗೂ 3 ವಿದ್ಯಾರ್ಥಿಗಳನ್ನು ಇನ್ನೊಂದು ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಇಬ್ಬರು ವಿದ್ಯಾರ್ಥಿಗಳನ್ನು ಅವರ ಪಾಲಕರು ಮನೆಗೆ ಕರೆದುಕೊಂಡು ಹೋಗಿ ಹೋಮ್ ಕ್ವಾರಂಟೈನ್ ಮಾಡಿದ್ದಾರೆ.
ಇದನ್ನೂ ಓದಿ :ರೈತ ಮುಖಂಡ ರಾಕೇಶ್ ಟಿಕಾಯತ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ
ಉಪವಿಭಾಗಾಧಿಕಾರಿ ಭೇಟಿ : ಶುಕ್ರವಾರ ಮಧ್ಯಾಹ್ನ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ವಸತಿ ಶಾಲೆಗೆ ಭೇಟಿ ನೀಡಿ, ಮಕ್ಕಳನ್ನು ಭೇಟಿ, ಅವರೊಂದಿಗೆ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದರು.