Advertisement

ಉಡುಪಿಯಲ್ಲಿ ದಿಗ್ವಿಜಯಕ್ಕಾಗಿ 7 ರಾಜ್ಯ ಕ್ರೀಡಾಳುಗಳ ಪೈಪೋಟಿ

11:26 PM Sep 14, 2019 | Sriram |

ಉಡುಪಿ: ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯು ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಖೀಲ ಭಾರತ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟ ಶುಕ್ರವಾರ ರಾತ್ರಿ ಸಾಂಕೇತಿಕವಾಗಿ ಉದ್ಘಾಟನೆಗೊಂಡರೆ, ಕ್ರೀಡಾ ಸ್ಪರ್ಧೆಗಳು ಶನಿವಾರ ಬೆಳಗ್ಗಿನಿಂದ ಆರಂಭವಾಗಿದೆ.

Advertisement

ದಕ್ಷಿಣ ಭಾರತದ 7 ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಲಕ್ಷದ್ವೀಪ, ಹಾಗೂ ಪಾಂಡಿಚೇರಿಯ ಸುಮಾರು 835 ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕೇರಳದಿಂದ 210, ತಮಿಳುನಾಡಿನಿಂದ 200, ಕರ್ನಾಟಕದಿಂದ 165, ತೆಲಂಗಾಣದಿಂದ 80, ಆಂಧ್ರಪ್ರದೇಶದಿಂದ 150, ಲಕ್ಷದ್ವೀಪ ದಿಂದ 30, ಪಾಂಡಿಚೇರಿಯಿಂದ 70 ಮಂದಿ ಕ್ರೀಡಾಳುಗಳು ಭಾಗವಹಿಸಿದ್ದರು.

8 ವಿಭಾಗಗಳಲ್ಲಿ ಕಾಲ್ನಡಿಗೆ, ಪೋಲೋವಾಲ್ಟ್, ಡಿಸ್ಕಸ್‌ತ್ರೋ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‌ಪುಟ್‌, 100 ಮೀ. ಓಟ, ಜಾವಲಿನ್‌ ತ್ರೊ, ರಿಲೆ, ಹ್ಯಾಮರ್‌ ತ್ರೊ, ಟ್ರಿಪಲ್‌ಜಂಪ್‌ ಇತ್ಯಾದಿ ಒಟ್ಟು 155 ಸ್ಪರ್ಧೆಗಳು ನಡೆಯಲಿದೆ. ಕ್ರೀಡಾಪಟುಗಳಿಗೆ ಪಾರದರ್ಶಕವಾದ ತೀರ್ಪು ದೊರೆಯುವ ನಿಟ್ಟಿನಲ್ಲಿ ಈ ಕ್ರೀಡಾಕೂಟಕ್ಕೆ ಫೋಟೋ ಫಿನಿಷ್‌ ಸಿಸ್ಟಮ್‌ ಅಳವಡಿಸಲಾಗಿದೆ. ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಆ್ಯತ್ಲೆಟಿಕ್‌ ಸಂಸ್ಥೆಯು ನೀಡಿದ ಜವಾಬ್ದಾರಿಯಂತೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆಯುತ್ತಿದೆ. ರವಿವಾರ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.

ದಾಖಲೆಯತ್ತ ಕ್ರೀಡಾಳುಗಳು
10 ಸಾವಿರ ಮೀ. ನಡಿಗೆ ಸ್ಪರ್ಧೆಯಿಂದ ಕ್ರೀಡಾಕೂಟ ಆರಂಭವಾಗಿದೆ. ಕ್ರೀಡಾಳುಗಳು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದು, ದಾಖಲೆ ಮಾಡಲು ಕಾತರರಾಗಿದ್ದಾರೆ.
-ಎ. ರಾಜವೇಲು,
ಕಾರ್ಯದರ್ಶಿ, ರಾಜ್ಯ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌

ಕಠಿನ ಅಭ್ಯಾಸ
ಉದ್ದ ಜಿಗತ ಮತ್ತು ತ್ರೋಬಾಲ್‌ನಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ದಾಖಲೆ ಮಾಡುವ ಇಂಗಿತ ಹೊಂದಿದ್ದೇನೆ. ಇದಕ್ಕಾಗಿ ಕಳೆದ ಎರಡು ತಿಂಗಳಿಂದ ಕಠಿನ ಅಭ್ಯಾಸ ನಡೆಸುತ್ತಿದ್ದೇನೆ.
– ಮಾಲಾ, ಕೇರಳದ ಕ್ರೀಡಾಪಟು

Advertisement
Advertisement

Udayavani is now on Telegram. Click here to join our channel and stay updated with the latest news.

Next