Advertisement

ಲಡಾಖ್ ದುರಂತ: ಸೇನಾ ವಾಹನ ನದಿಗೆ ಉರುಳಿ ಬಿದ್ದು ಏಳು ಮಂದಿ ಯೋಧರು ಹುತಾತ್ಮ

02:26 PM May 28, 2022 | Team Udayavani |

ಜಮ್ಮು-ಕಾಶ್ಮೀರ: ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಹಲವಾರು ಸೈನಿಕರು ಗಾಯಗೊಂಡಿರುವ ಘಟನೆ ಶುಕ್ರವಾರ (ಮೇ 27) ಲಡಾಖ್ ನ ಟುರ್ ಟುಕ್ ಸೆಕ್ಟರ್ ನಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಮೊದಲ ಹಿಂದಿ ಲೇಖಕಿ: ಗೀತಾಂಜಲಿ ಶ್ರೀಯ “ಟೂಮ್ ಆಫ್ ಸ್ಯಾಂಡ್” ಕಾದಂಬರಿಗೆ ಬೂಕರ್ ಪ್ರಶಸ್ತಿ

26 ಯೋಧರಿದ್ದ ಸೇನಾ ವಾಹನವು ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಹುತಾತ್ಮರಾಗಿದ್ದಾರೆ.

ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

Koo App

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next