Advertisement

ಬೀದರ್‌ನಲ್ಲಿ ಮತ್ತೆ 7 ಮಂದಿಗೆ ಕೋವಿಡ್‌-19 ಸೋಂಕು ದೃಢ

08:51 PM Jun 28, 2020 | Sriram |

ಬೀದರ್‌: ಜಿಲ್ಲೆಯಲ್ಲಿ ಒಂದೇ ದಿನ ಮೂವರನ್ನು ಬಲಿ ಪಡೆದು ಆರ್ಭಟಿಸಿದ್ದ ಕೋವಿಡ್‌-19 ಸೋಂಕು ರವಿವಾರ ಕೊಂಚ ತಗ್ಗಿದ್ದು, 7 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 562ಕ್ಕೆ ಏರಿಕೆ ಆಗಿದೆ.

Advertisement

55 ವರ್ಷದ ಪುರುಷ (ಪಿ-12189), 60 ವರ್ಷದ ವೃದ್ಧೆ (ಪಿ-12190), 64 ವರ್ಷದ ವೃದ್ಧೆ (ಪಿ-12191), 39 ವರ್ಷದ ಮಹಿಳೆ (ಪಿ-12192), 16 ವರ್ಷದ ಯುವತಿ (ಪಿ-12193), 43 ವರ್ಷದ ಪುರುಷ (ಪಿ-12194) ಮತ್ತು 45 ವರ್ಷದ ಪುರುಷ (ಪಿ-12195) ರೋಗಿಗಳಿಗೆ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಈವರೆಗೆ 562 ಪಾಸಿಟಿವ್‌ ಪ್ರಕರಣಗಳು ವರದಿ ಆದಂತಾಗಿದ್ದು, 19 ಜನ ಸಾವನ್ನಪ್ಪಿದ್ದರೆ 456 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 87 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

857 ಜನರ ವರದಿ ಬಾಕಿ: ಜಿಲ್ಲೆಯಲ್ಲಿ ಕೋವಿಡ್‌-19 ಶಂಕಿತ 857 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ. ರವಿವಾರ 137 ಜನ ಸೇರಿ ಈವರೆಗೆ 37,036 ಜನರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 35,617 ಮಂದಿಯದ್ದು ನೆಗೆಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 5503 ಮತ್ತು ದ್ವಿತೀಯ ಸಂಪರ್ಕಿತ 6887 ಜನರನ್ನು ಗುರುತಿಸಲಾಗಿದೆ ಎಂದು ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next