ಕೋಲಾರ: ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆ ಯಾದಲ್ಲಿ ಮಾರುಕಟ್ಟೆಯ ವಹಿವಾಟನ್ನೇ ಬಂದ್ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಪಿಎಂಸಿ ಅಧ್ಯಕ್ಷರು, ಲಾರಿ ಚಾಲಕರ ಅಸೋಸಿಯೇಷನ್, ವರ್ತಕರ ಸಂಘದ ಪ್ರತಿನಿಧಿಗಳ ಜತೆ ಸಭೆ ನಡೆಸಿ ಮಾತನಾಡಿದರು.
ಹಸಿರು ವಲಯವಾಗಿದ್ದ ಜಿಲ್ಲೆಯಲ್ಲೂ ಕಂಡು ಬಂದ 9 ಕೋವಿಡ್ 19 ಸೋಂಕಿನ ಪ್ರಕರಣ ಗಳಲ್ಲಿ 7 ಮಂದಿ ಅಂತರರಾಜ್ಯ ಸಾಗಾಣಿಕೆ ಮಾಡುವ ಲಾರಿ ಚಾಲಕರೇ ಆಗಿರುವುದರಿಂದಎಪಿಎಂಸಿ ಆಡಳಿತ ಮಂಡಳಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು. ಎಪಿಎಂಸಿಗೆ ಬರುವ ಲಾರಿ, ಚಾಲಕರು, ಕ್ಲೀನರ್‌ಗಳ ಬಗ್ಗೆ ಎಚ್ಚರಿಕೆ ಇರಲಿ,
ಆರೋಗ್ಯ ತಪಾಸಣೆಗೆ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸುವು ದು ಸೇರಿದಂತೆ ಎಲ್ಲಾ ರೀತಿಯ ಸಹ ಕಾರ ಜಿಲ್ಲಾಡಳಿತ ನೀಡುತ್ತದೆ. ಕೋವಿಡ್ 19 ಹಿನ್ನೆಲೆಯಲ್ಲಿ ನಮ್ಮ ನಡವಳಿಕೆಯಲ್ಲಿ ಬದಲಾವಣೆಯಾಗಬೇಕು, ಎಪಿಎಂಸಿ ಆಡಳಿತ ಮಂಡ ಳಿಗೆ ಅಧಿಕಾರ ಇದೆ, ಮಾತು ಕೇಳದವರಿಗೆ ಪೊಲೀಸರ ಸಹಕಾರ ಪಡೆದು ಕ್ರಮ ತೆಗೆದುಕೊಳ್ಳಿ ಎಂದು ಎಪಿಎಂಸಿ ಅಧ್ಯಕ್ಷರಿಗೆ ಸೂಚಿಸಿದರು.
ಸೋಂಕು ಬಂದರೆ ಎಪಿಎಂಸಿ ಬಂದ್: ಎಪಿಎಂಸಿಯಲ್ಲಿ ದೈಹಿಕ ಅಂತರ ಪಾಲನೆಯಾಗುತ್ತಿಲ್ಲ ಎಂದು ಹಲವು ಬಾರಿ ದೂರು ಬಂದಾಗಲೆಲ್ಲಾ ತಹಶೀಲ್ದಾರ್‌ರನ್ನು ಕಳುಹಿಸಿಕೊಟ್ಟಿದ್ದೆ, ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ, ನಿರ್ಲಕ್ಷ ವಹಿಸಿ ಕೋವಿಡ್ 19 ಪಾಸಿಟಿವ್ ಬಂದರೆ ಎಪಿಎಂಸಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರಕು ಸಾಗಾಣಿಕೆ, ಅತ್ಯವಶ್ಯಕ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಜಿಲ್ಲೆ ಯಿಂದ ಅಂತರ್‌ರಾಜ್ಯಕ್ಕೆ ಸಂಚರಿಸಿದ ಲಾರಿ ಚಾಲಕರಿಗೇ ಹೆಚ್ಚು ಸೋಂಕು ಕಾಣಿಸಿ ಕೊಂಡಿದೆ. ಈ ಹಿನ್ನೆಲೆಯಲ್ಲಿ ಲಾರಿ ಚಾಲಕರು ಎಚ್ಚರ ವಹಿಸಬೇಕು ಎಂದರು. ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್ ಮಾತನಾಡಿ, ಆಂಧ್ರ, ತಮಿಳುನಾಡು ರಾಜ್ಯ ಗಳಿಗೆ ಹೋಗಿರುವ ಲಾರಿ ಚಾಲಕರನ್ನು ಆ ರಾಜ್ಯದ ಗಡಿಯೊಳಕ್ಕೆ ಚೆಕ್ ಪೋಸ್ಟ್‌ನಲ್ಲಿ ಬಿಡುವುದಿಲ್ಲ,
ಹಲ್ಲೆ ನಡೆಸಿರುವ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಮುಂದಿನ ಎರಡು ಭಾನುವಾರ ಲಾಕ್ ಡೌನ್ ಕಡ್ಡಾಯಗೊಳಿಸಿರುವ ಬಗ್ಗೆ ಸಿಎಂ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 5 ಎಪಿಎಂಸಿಗಳಿಗೂ ರಜೆ ನೀಡುತ್ತೇವೆ. ಇದರಿಂದ ಪ್ರಾಂಗಣ ಸ್ವಚ್ಛತೆಗೆ ಸಹಾಯ ವಾಗುತ್ತದೆ ಎಂದರು.ಜಿಪಂ ಸಿಇಒ ಎಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಉಪವಿಭಾಗಾಧಿಕಾರಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.