Advertisement

ರಕ್ಷಣೆಗೆ 7 ಸಂಸ್ಥೆ; 200 ವರ್ಷಗಳ ಹಳೆಯ ಒಎಫ್ ಬಿ ವಿಸರ್ಜನೆ

02:02 AM Oct 16, 2021 | Team Udayavani |

ಹೊಸದಿಲ್ಲಿ: ಆತ್ಮನಿರ್ಭರ ಭಾರತ ಅಡಿಯಲ್ಲಿ ಕೇಂದ್ರ ಸರಕಾರವು ಸಾರ್ವಜನಿಕ ವಲಯದ ರಕ್ಷಣ ಸಂಸ್ಥೆಗಳ ರಚನೆಗೆ ನಿರ್ಧರಿಸಿದೆ. ಪ್ರಧಾನಿ ಮೋದಿ ಈ ಏಳು ಸಂಸ್ಥೆಗಳನ್ನು ದೇಶಕ್ಕೆ ಸಮರ್ಪಿಸಿ, ದೇಶವನ್ನು ಸ್ವಂತಿಕೆಯ ಆಧಾರದ ಮೇಲೆ ಅತೀ ದೊಡ್ಡ ಮಿಲಿಟರಿ ಶಕ್ತಿಯಾಗಿ ಮಾಡುವ ಗುರಿ ಹೊಂದಲಾಗಿದೆ ಎಂದಿದ್ದಾರೆ.ಈ ಹಿನ್ನೆಲೆಯಲ್ಲಿ 200 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ರಕ್ಷಣ ಕಾರ್ಖಾನೆ ಮಂಡಳಿ ( ಒಎಫ್ ಬಿ ) ಯನ್ನು ವಿಸರ್ಜಿಸಲಾಗಿದೆ.

Advertisement

ಜಾಗತಿಕ ಬ್ರ್ಯಾಂಡ್‌ ಆಗಲಿ
ಈಗ ಸ್ಥಾಪನೆ ಮಾಡಲಾಗುತ್ತಿರುವ 7 ಸಂಸ್ಥೆಗಳು ಅತ್ಯುತ್ಕೃಷ್ಟ ಶಸ್ತ್ರಾಸ್ತ್ರಗಳನ್ನು ನಿರ್ಮಾಣ ಮಾಡಬೇಕು. ಇವುಗಳ ಉತ್ಪಾದನೆಯಲ್ಲಿ ಅನುಭವಿಗಳಾಗುವ ಜತೆಗೆ ಈ ಉತ್ಪನ್ನಗಳು ಜಾಗತಿಕ ಬ್ರ್ಯಾಂಡ್‌ ಗಳಾಗಿ ಬದಲಾಗಬೇಕು ಎಂದು ಮೋದಿ ಹೇಳಿದರು. ಮೊದಲನೇ ಮಹಾಯುದ್ಧದ ಸಮಯದಲ್ಲೇ ಭಾರತದ ಶಸ್ತ್ರಾಸ್ತ್ರ ಕಾರ್ಖಾನೆಯ ಸಾಮರ್ಥ್ಯವನ್ನು ಇಡೀ ಜಗತ್ತು ಕಂಡಿದೆ. ಆದರೆ ಸ್ವಾತಂತ್ರ್ಯಾನಂತರದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ನಾವು ವಿದೇಶಗಳ ಮೊರೆ ಹೋಗಬೇಕಾಯಿತು. ಸ್ವಾತಂತ್ರ್ಯಾನಂತರ ನಾವು ಈ ಬಗ್ಗೆ ಹೆಚ್ಚು ಗಮನ ಹರಿಸಿ, ಹೊಸ ಪೀಳಿಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ ಈ ಬಗ್ಗೆ ಗಮನ ಹರಿಸಲೇ ಇಲ್ಲ. ಹೀಗಾಗಿ ಭಾರತ ಸಂಪೂರ್ಣವಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾಯಿತು. ಈಗ ಆರಂಭಿಸಲಾಗುತ್ತಿರುವ ಏಳು ಕಂಪೆನಿಗಳು ದೇಶದ ದಿಸೆಯನ್ನೇ ಬದಲಿಸಲಿವೆ ಎಂದರು.

ಇದನ್ನೂ ಓದಿ:ಸೂಪರ್‌ ಚೆನ್ನೈಗೆ 4ನೇ ಐಪಿಎಲ್‌ ಕಿರೀಟ

65 ಸಾವಿರ ಕೋ.ರೂ. ಆರ್ಡರ್‌
ಈ ಕಾರ್ಯಕ್ರಮದಲ್ಲೇ ಪ್ರಧಾನಿ ದೇಶದ ಸೇನೆಗಾಗಿ 65 ಸಾವಿರ ಕೋ.ರೂ. ಮೌಲ್ಯದ ಶಸ್ತ್ರಾಸ್ತ್ರಗಳಿಗೆ ಆರ್ಡರ್‌ ನೀಡಿ ದರು. ಇದು ಈ ಕಂಪೆನಿಗಳ ಆತ್ಮಸ್ಥೈರ್ಯ ವನ್ನು ಹೆಚ್ಚಿಸಲಿದೆ ಎಂದರಲ್ಲದೆ ಸಂಶೋಧನೆ ಮತ್ತು ನಾವೀನ್ಯ ಅಳವಡಿಸಿಕೊಳ್ಳಿ. ಭವಿಷ್ಯದ ತಂತ್ರಜ್ಞಾನಕ್ಕೆ ನಾಯಕರಾಗಿ ಎಂದರು.

ವಿವಿಧ ಸ್ಟಾರ್ಟ್‌ಅಪ್‌ ಕಂಪೆನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಈ 7 ಕಂಪೆನಿಗಳ ಕೆಲಸದಲ್ಲಿ ಭಾಗಿದಾರರಾಗಿ. ನಿಮ್ಮ ಸಂಶೋಧನೆ ಮತ್ತು ವಸ್ತುಗಳು ಇವರಿಗೆ ಹೇಗೆ ಉಪಯೋಗಿ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಎಂದರು.

Advertisement

ಏಳು ಕಂಪೆನಿಗಳು ಯಾವುವು?

01 ಮ್ಯೂನಿಷನ್ಸ್‌ಇಂಡಿಯಾ ಲಿ. (ಎಂಐಎಲ್‌)
02 ಆರ್ಮರ್ಡ್‌ ವೆಹಿಕಲ್‌ ನಿಗಮ್‌ ಲಿ. (ಎನಿಎಎನ್‌ಐ)
03 ಅಡ್ವಾನ್ಸ್‌ಡ್‌ ವೆಪನ್‌ಆ್ಯಂಡ್‌ ಈಕ್ವಿಪ್‌ಮೆಂಟ್‌ ಲಿ. (ಎಡಬ್ಲ್ಯುಇ ಇಂಡಿಯಾ)
04 ಟ್ರೂಪ್‌ ಕಂಫ‌ರ್ಟ್‌ ಲಿ. (ಟಿಸಿಎಲ್‌)
05 ಯಂತ್ರ ಇಂಡಿಯಾ ಲಿ. (ವೈಐಎಲ್‌)
06 ಇಂಡಿಯಾ ಆಪ್ಟೆಲ್‌ ಲಿ. (ಐಒಎಲ್‌)
07 ಗ್ಲೈಡರ್ಸ್‌ ಇಂಡಿಯಾ ಲಿ. (ಜಿಐಎಲ್‌)

Advertisement

Udayavani is now on Telegram. Click here to join our channel and stay updated with the latest news.

Next