Advertisement
ಮೃತರನ್ನು ಸೋನಂ (19), ವಾರಿಸ್ (17), ಮೆಹಕ್ (16), ಜೈದ್ (15) ಮತ್ತು ಮಾಹಿರ್ (12) ಎಂದು ಗುರುತಿಸಲಾಗಿದೆ.
ಕಳೆದ ಸೋಮವಾರ ರಾತ್ರಿ ರಹೀಸುದ್ದೀನ್ ಕುಟುಂಬದ ಏಳು ಮಂದಿ ಸದಸ್ಯರು ಊಟ ಮಾಡಿ ಮಲಗಿದ್ದಾರೆ ಮಂಗಳವಾರ ಸಂಜೆಯವರೆಗೂ ಮನೆಯ ಬಾಗಿಲು ತೆರೆಯಲಿಲ್ಲ ಇದರಿಂದ ಅನುಮಾನಗೊಂಡ ಪಕ್ಕದ ಮನೆಯ ಸದಸ್ಯರು ಬಾಗಿಲು ಬಡಿದಿದ್ದಾರೆ ಆದರೆ ಒಳಗಿನಿಂದ ಯಾವುದೇ ಉತ್ತರ ಬರಲಿಲ್ಲ, ಇದರಿಂದ ಅನುಮಾನಗೊಂಡ ನೆರೆಮನೆಯವರು ಬಾಗಿಲು ಮುರಿದು ಒಳ ಪ್ರವೇಶಿಸಿದವರು ಬೆಚ್ಚಿ ಬಿದ್ದಿದ್ದಾರೆ ಕಾರಣ ಮನೆಯಲ್ಲಿದ್ದ ಏಳು ಮಂದಿಯಲ್ಲಿ ಐದು ಮಂದಿ ಶವವಾಗಿ ಪತ್ತೆಯಾಗಿದ್ದರೆ ಇಬ್ಬರು ಗಂಭೀರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರು. ಇದನ್ನು ಕಂಡ ನೆರೆಮನೆಯವರು ಕೂಡಲೆ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ ಅಲ್ಲದೆ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಅದರಂತೆ ಮನೆಯವರು ಮನೆಯಲ್ಲಿ ಮಲಗುವ ವೇಳೆ ಚಳಿಯಿಂದ ಬೆಚ್ಚಗಾಗಲು ಕಲ್ಲಿದ್ದಲಿನಿಂದ ಬೆಂಕಿ ಹಚ್ಚಿ ಮಲಗಿದರು. ಆ ಸಮಯದಲ್ಲಿ ಮನೆಯ ಎಲ್ಲಾ ಬಾಗಿಲು, ಕಿಟಕಿಗಳನ್ನು ಮುಚ್ಚಿದ್ದಾರೆ. ಈ ವೇಳೆ ಕಲ್ಲಿದ್ದಲು ಉರಿಯುತ್ತಿರುವಾಗ ಹೊಗೆ ಹೊರಹೋಗಲಾರದೆ ಇಡೀ ಮನೆಯನ್ನು ತುಂಬಿಕೊಂಡಿದೆ. ಇದರಿಂದ ಮನೆಯಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಒಳಗೆ ಮಲಗಿದ್ದ ಎಲ್ಲರೂ ಉಸಿರುಗಟ್ಟಿ 5 ಮಂದಿ ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ.
Related Articles
Advertisement
ಸದ್ಯ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಅದರ ವರದಿ ಬಂದ ಬಳಿಕವೇ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: MS Dhoni; ಮೂರು ಐಸಿಸಿ ಟ್ರೋಫಿ ಗೆದ್ದರೂ ಧೋನಿಗೆ ಯಾಕೆ ಸಿಕ್ಕಿಲ್ಲ ಅರ್ಜುನ ಪ್ರಶಸ್ತಿ?