ನವದೆಹಲಿ: ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜಾಗತಿಕ ಸಭೆಗೆ ಮುಂಚಿತವಾಗಿ ರಾಷ್ಟ್ರ ರಾಜಧಾನಿಯನ್ನು ಶುಚಿಗೊಳಿಸಲು ದೆಹಲಿ ಸರ್ಕಾರವು ಕೇಂದ್ರದೊಂದಿಗೆ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ.
ಶೃಂಗಸಭೆಗೆ ವಿವಿಧ ದೇಶದ ಗಣ್ಯರು ಹಾಜರಾಗುತ್ತಿದ್ದು ಹೀಗಾಗಿ ಕಾರ್ಯಕ್ರಮ ನಡೆದು ಮುಗಿಯುವವರೆಗೂ ಬಂದಿರುವ ಗಣ್ಯರಿಗೆ ಕಿಂಚಿತ್ತೂ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ದೇಶದ ಕರ್ತವ್ಯ ಹಾಗಾಗಿ ಹೆಚ್ಚಿನ ಸಿದ್ಧತೆಗಳ ಅವಶ್ಯಕತೆ ಇರುತ್ತದೆ.
ಶೃಂಗಸಭೆ ದೆಹಲಿಯಲ್ಲಿ ನಡೆಯುವ ಕಾರಣ ಇಲ್ಲಿ ಕೋತಿಗಳ ಉಪಟಳ ಜೋರಾಗಿದೆ ಜನರನ್ನು ಅಟ್ಟಾಡಿಸಿಕೊಂಡು ಬರುವುದು, ವಾಹನಗಳ ಮೇಲೆ ದಾಳಿ ಮಾಡುವುದು ಹೀಗೆ ಹಲವು ರೀತಿಯಲ್ಲಿ ಮಹಾನಗರ ಪಾಲಿಕೆಗೆ ಕೋತಿಗಳ ಸಮಸ್ಯೆ ಬಹಳ ದೊಡ್ಡ ಮಟ್ಟದಲ್ಲಿ ತಲೆದೋರಿದೆ.
ಅಷ್ಟು ಮಾತ್ರವಲ್ಲದೆ ಮುಂಬರುವ ಶೃಂಗಸಭೆಯು ದೆಹಲಿಯಲ್ಲಿ ನಡೆಯುತ್ತಿರುವ ಕಾರಣ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೋತಿಗಳ ನಿಯಂತ್ರಣಕ್ಕೆ ಹೊಸದೊಂದು ತಂತ್ರವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಕೋತಿಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮುಸಿಯಾಗಳ ಕಟೌಟ್ ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಇದಕ್ಕಾಗಿಯೇ ಕೆಲ ಯುವಕರಿಗೆ ಕೋತಿಗಳಂತೆ ಅನುಕರಣೆ ಮಾಡುವ ತರಬೇತಿಯನ್ನೂ ನೀಡಲಾಗುತ್ತಿದೆ (ಮಂಕಿ ಮ್ಯಾನ್) ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಕಟೌಟ್ ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ: Vijayapura: ಐತಿಹಾಸಿಕ ಕಂದಕದಲ್ಲಿ ಬಿದ್ದು ಯುವಕ ಆತ್ಮಹತ್ಯೆ; ಪರಾರಿಯಾದ ಜತೆಗಿದ್ದ ಯುವತಿ