Advertisement

ಚಾಮರಾಜನಗರ: ಕೋವಿಡ್‌ನಿಂದ 7 ಮಂದಿ ಸಾವು

09:09 PM Apr 29, 2021 | Team Udayavani |

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಒಂದೇ ದಿನ 7 ಮಂದಿ ಮೃತಪಟ್ಟಿದ್ದಾರೆ. ಮೊದಲ ಅಲೆಯೂ ಸೇರಿದಂತೆ ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ ಒಂದೇ ದಿನ 7 ಮಂದಿ ಮೃತಪಟ್ಟಿರುವುದು ಇದೇ ಮೊದಲು.

Advertisement

ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ 70 ವರ್ಷದ ವೃದ್ಧ, ಹರವೆ ಗ್ರಾಮದ 80 ವರ್ಷದ ವೃದ್ಧೆ, ವಿ. ಸಿ. ಹೊಸೂರು ಗ್ರಾಮದ 53 ವರ್ಷದ ವ್ಯಕ್ತಿ, ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದ  38 ವರ್ಷದ ವ್ಯಕ್ತಿ,  ಕೊಳ್ಳೇಗಾಲ ಪಟ್ಟಣದ 75 ವರ್ಷದ ವೃದ್ಧ, ಹಂಗಳಪುರ ಗ್ರಾಮದ 38 ವರ್ಷದ ವ್ಯಕ್ತಿ, ಯಳಂದೂರು ತಾಲೂಕು ಯರಗಂಬಳ್ಳಿ ಗ್ರಾಮದ 47 ವರ್ಷದ ವ್ಯಕ್ತಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ಧಾರೆ ಎಂದು ಗುರುವಾರ ಜಿಲ್ಲಾಡಳಿತ ತಿಳಿಸಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 138ಕ್ಕೇರಿದೆ.

ಇದನ್ನೂ ಓದಿ:ಆಮ್ಲಜನಕದ ಬದಲಿಗೆ ಅಗ್ನಿ ನಿರೋಧಕ ಸಿಲಿಂಡರ್ ಮಾರಿದ ಕಿರಾತಕರು

ಗುರುವಾರ ಜಿಲ್ಲೆಯಲ್ಲಿ 377 ಹೊಸ ಪ್ರಕರಣಗಳು ದೃಢಪಟ್ಟಿವೆ. 215 ಮಂದಿ ಗುಣಮುಖರಾಗಿದ್ದಾರೆ. 2130 ಸಕ್ರಿಯ ಪ್ರಕರಣಗಳಿವೆ. 45 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 290 ಜನರನ್ನು ಹೋಂ ಐಸೋಲೇಷನ್‌ಗೆ ಕಳುಹಿಸಲಾಗಿದೆ.  ಒಟ್ಟು 1532 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 1578 ಗಂಟಲುದ್ರವ ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

ಚಾಮರಾಜನಗರ:ಕೋವಿಡ್ ಅಂಕಿ ಅಂಶ 

Advertisement

ಇಂದಿನ ಪ್ರಕರಣ: 377

ಇಂದು ಗುಣಮುಖ: 215

ಒಟ್ಟು ಗುಣಮುಖ: 8290

ಇಂದಿನ ಸಾವು: 07

ಒಟ್ಟು ಸಾವು: 138

ಸಕ್ರಿಯ ಪ್ರಕರಣಗಳು: 2130

ಒಟ್ಟು ಸೋಂಕಿತರು: 10584

Advertisement

Udayavani is now on Telegram. Click here to join our channel and stay updated with the latest news.

Next