Advertisement

ಐಸಿಸಿ ಟಿ20 ತಂಡಗಳಲ್ಲಿ ಭಾರತದ 7 ಕ್ರಿಕೆಟಿಗರು

10:52 PM Jan 23, 2023 | Team Udayavani |

ದುಬಾೖ: ಐಸಿಸಿ 2022ರ ವಾರ್ಷಿಕ ಟಿ20 ತಂಡಗಳು ಪ್ರಕಟಗೊಂಡಿವೆ. ಇದರಲ್ಲಿ ಭಾರತ ಒಟ್ಟು 7 ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಪುರುಷರ ತಂಡದಲ್ಲಿ ಮೂವರು ಹಾಗೂ ವನಿತಾ ತಂಡದಲ್ಲಿ ನಾಲ್ವರು ಕಾಣಿಸಿಕೊಂಡಿದ್ದಾರೆ.

Advertisement

ಪುರುಷರ ತಂಡದಲ್ಲಿ ಸ್ಥಾನ ಪಡೆದ ಭಾರತದ ಆಟಗಾರರೆಂದರೆ ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ. ಇಂಗ್ಲೆಂಡ್‌ನ‌ ಜಾಸ್‌ ಬಟ್ಲರ್‌ ಕ್ಯಾಪ್ಟನ್‌ ಕಂ ಕೀಪರ್‌ ಆಗಿದ್ದಾರೆ.

ಸೋಫಿ ಡಿವೈನ್‌ ನೇತೃತ್ವದ ವನಿತಾ ತಂಡದಲ್ಲಿರುವ ಭಾರತದ ಆಟಗಾರ್ತಿಯರೆಂದರೆ ಸ್ಮತಿ ಮಂಧನಾ, ದೀಪ್ತಿ ಶರ್ಮ, ರಿಚಾ ಘೋಷ್‌ ಮತ್ತು ರೇಣುಕಾ ಸಿಂಗ್‌ ಠಾಕೂರ್‌.

ಐಸಿಸಿ ಪುರುಷರ ಟಿ20 ತಂಡ
ಜಾಸ್‌ ಬಟ್ಲರ್‌ (ನಾಯಕ), ಮೊಹಮ್ಮದ್‌ ರಿಜ್ವಾನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಗ್ಲೆನ್‌ ಫಿಲಿಪ್ಸ್‌, ಸಿಕಂದರ್‌ ರಝ, ಹಾರ್ದಿಕ್‌ ಪಾಂಡ್ಯ, ಸ್ಯಾಮ್‌ ಕರನ್‌, ವನಿಂದು ಹಸರಂಗ, ಹ್ಯಾರಿಸ್‌ ರವೂಫ್ ಮತ್ತು ಜೋಶ್‌ ಲಿಟ್ಲ.

ಐಸಿಸಿ ವನಿತಾ ಟಿ20 ತಂಡ
ಸ್ಮತಿ ಮಂಧನಾ, ಬೆತ್‌ ಮೂನಿ, ಸೋಫಿ ಡಿವೈನ್‌ (ನಾಯಕಿ), ಆ್ಯಶ್ಲಿ ಗಾರ್ಡನರ್‌, ಟಹ್ಲಿಯಾ ಮೆಕ್‌ಗ್ರಾತ್‌, ನಿದಾ ದಾರ್‌, ದೀಪ್ತಿ ಶರ್ಮ, ರಿಚಾ ಘೋಷ್‌, ಸೋಫಿ ಎಕ್‌ ಸ್ಟೋನ್‌, ಇನೋಕಾ ರಣವೀರ, ರೇಣುಕಾ ಸಿಂಗ್‌ ಠಾಕೂರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next