Advertisement

37 ದಿನದಲ್ಲಿ 7 ಕೋಟಿ ಎಲ್‌ಪಿಜಿ ಸಂಪರ್ಕ

12:30 AM Mar 09, 2019 | |

ಹೊಸದಲ್ಲಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ (ಪಿಎಂವೈಯು) ಕಳೆದ 34 ದಿನಗಳಲ್ಲಿ ದಿನವೊಂದಕ್ಕೆ 69,000 ಸಂಪರ್ಕದ ಲೆಕ್ಕದಲ್ಲಿ ಒಟ್ಟು 7 ಕೋಟಿ ಬಡವರ ಮನೆಗಳಿಗೆ ಉಚಿತ ಎಲ್‌ಪಿಜಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. 2016ರ ಮೇ 1ರಂದು ಆರಂಭಗೊಂಡಿದ್ದ ಈ ಯೋಜನೆಯಡಿ, 5 ಕೋಟಿ ಬಡವರ ಮನೆಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಈಗ ಆ ಗುರಿಯನ್ನು ದಾಟಿ ಮುನ್ನಡೆದಿದ್ದೇವೆ. ಈಗಿನ ಸ್ಥಿತಿಗತಿಗಳ ಪ್ರಕಾರ, ದೇಶದ ಶೇ. 80ರಷ್ಟು ಬಡವರ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. 2021ರ ವೇಳೆಗೆ ಎಲ್ಲಾ ಬಡವರಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next