ಕೈವಲ್ಯಾಪುರ ಗ್ರಾಮದಲ್ಲಿ ಸಿಡಿಲಿಗೆ ಎರಡು ಎತ್ತುಗಳು ಮೃತಪಟ್ಟಿದ್ದು, ಸುಮಾರು 80 ಸಾವಿರ ರೂ.ನಷ್ಟ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಹುಯಿಗೆರೆ ಸುತ್ತಮುತ್ತ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಎನ್‌ಆರ್‌ಪುರ ತಾಲೂಕಿನಲ್ಲಿ ಗಾಳಿ ಮಳೆಗೆ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗುರುಳಿ ಮೆಸ್ಕಾಂಗೆ ಲಕ್ಷಾಂತರ ರೂ.
ನಷ್ಟ ಸಂಭವಿಸಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆಯ ಪ್ರಮಾಣ: (ಸೆಂ.ಮೀ.ಗಳಲ್ಲಿ): ಭಾಗಮಂಡಲ, ನಾಪೋಕ್ಲು, ಮಡಿಕೇರಿ, ಆಲೂರು, ಹೆಸರಘಟ್ಟ ತಲಾ 3, ಧರ್ಮಸ್ಥಳ, ಸೋಮವಾರ ಪೇಟೆ, ಮಾದಾಪುರ, ಕೋಣನೂರು, ಎಚ್.ಡಿ.ಕೋಟೆ, ಚಿಂತಾಮಣಿ, ಕಳಸ ತಲಾ 2, ಕುಶಾಲನಗರ, ಎನ್. ಆರ್.ಪುರ, ಕೊಟ್ಟಿಗೆಹಾರ, ಶಿವಾನಿ, ಚೆನ್ನರಾಯಪಟ್ಟಣ, ನಂಜನಗೂಡು, ಯೆಳಂದೂರು, ಮಳವಳ್ಳಿ, ಕೃಷ್ಣರಾಜ ಪೇಟೆ, ಮದ್ದೂರು, ಕೋಲಾರ,
ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ, ಶಿಡ್ಲಘಟ್ಟ, ಚನ್ನಪಟ್ಣ, ಕನಕಪುರ ತಲಾ 1. ಈ ಮಧ್ಯೆ, ದಕ್ಷಿಣ ಒಳನಾಡಿನ
ಕೆಲವೆಡೆ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಬಹುತೇಕ ಸಾಮಾನ್ಯವಾಗಿತ್ತು.
Advertisement
ಕಲಬುರಗಿಯಲ್ಲಿ ರಾಜ್ಯದಲ್ಲಿಯೇ ಗರಿಷ್ಠವೆನಿಸಿದ 40 ಡಿ.ಸೆ.ತಾಪಮಾನ ದಾಖಲಾಯಿತು. ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಂಭವವಿದೆ.