Advertisement

ಅರಿಶಿನ ಲಾರಿ ದರೋಡೆ ಪ್ರಕರಣ: ₹1.3 ಕೋಟಿ ಮೌಲ್ಯದ ವಸ್ತು ವಶ, 7 ಮಂದಿ ಸೆರೆ

03:49 PM Jun 16, 2020 | keerthan |

ಚಿಕ್ಕೋಡಿ: ಅರಿಶಿನ ಲಾರಿ ಕಳ್ಳತನ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿ ಅವರಿಂದ ₹1.3 ಕೊಟಿ ವೆಚ್ಚದ ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗಣೇಶ ಕಲ್ಲಪ್ಪ ಕೋಳಿ, ದಾದಾಸಾಹೇಬ ಶಂಕರ ಟೋಣ್ಣೆ, ಜನಾರ್ಧನ ಫೆಂಡ, ಗುರುನಾಥ ಹಾಲಳ್ಳಿ, ಶಿವಾನಂದ ಪನದಿ, ಕಲೀಮ್ ಮಾಲದಾರ, ಪಾಂಡುರಂಗ ಹಳ್ಳೂರ ಎಂಬಾತರನ್ನು ಬಂಧಿಸಲಾಗಿದೆ.

ಜೂ. 7ರಂದು ತಮಿಳಯನಾಡಿನ ಎಂ. ಚಿನ್ನಸ್ವಾಮಿ ಎಂಬವರು ಅತಿಶಿನ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುವಾಗ ಕಬ್ಬೂರದಿಂದ ಎರಡು ಕಿ.ಮೀ. ದೂರದಲ್ಲಿ ದರೋಡೆಕೋರರು ಅಡ್ಡಗಟ್ಟಿದ್ದರು.‌ ಚಾಲಕ ಹಾಗೂ ಕ್ಲೀನರ್ ನನ್ನು ಅಪಹರಿಸಿಕೊಂಡು ಅಥಣಿ ತಾಲೂಕಿನ ಹಳ್ಳಿಗೆ ಕೈ-ಕಾಲು‌ ಕಟ್ಟಿ ಒಗೆದು ಬಂದಿದ್ದರು. ನಂತರ ಲಾರಿಯನ್ನು ಅಪಹರಿಸಿ ಲಾರಿ, 13 ಲಕ್ಷ ರೂ.‌ ಮೌಲ್ಯದ ಅರಿಶಿನವನ್ನು ದರೋಡೆ ಮಾಡಿದ್ದರು.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ತಂಡಗಳನ್ನು ರಚನೆ ಮಾಡಿದ್ದರು. ದರೋಡೆಕೋರರನ್ನು ಬಂಧಿಸಿ ಎರಡು ಲಾರಿ, ಟ್ರ್ಯಾಕ್ಟರ್, ಎರಡು, ಕಾರು, ದ್ವಿಚಕ್ರ ವಾಹನ ಸೇರಿದಂತೆ 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲ ಬಂಧಿತರನ್ನು ನ್ಯಾಯಂಗ ವಶಕ್ಕೆ ಒಪ್ಪಿಸಲಾಗಿದೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ. ಡಿಎಸ್ ಪಿ ಮನೋಜ ನಾಯಿಕ. ಸಿಪಿಐ ಆರ್.ಆರ್. ಪಾಟೀಲ, ಪಿಎಸ್ ಐ ರಾಕೇಶ ಬಗಲಿ, ಅಂಕಲಿ ಪಿಎಸ್ ಐ ಎಲ್.ಎಂ. ಆರಿ, ಖಡಕಲಾಟ ಪಿಎಸ್ ಐ ಎಸ್.ಸಿ. ಮಂಟೂರ ಹಾಗೂ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next