ಬೆಂಗಳೂರು: ಮಾನವ ಹಕ್ಕು ಆಯೋಗದ ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ 7 ಮಂದಿಯನ್ನು ಕೋಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಮೂರ್ತಿ, ಪ್ರದೀಪ್, ಧ್ರುವರಾಜ್, ರಮ್ಯ, ಸುಶ್ಮಿತಾ, ಜಯಲಕ್ಷ್ಮೀ, ಇಂದ್ರ ಬಂಧಿತರು. 1 ಕಾರು, 2 ಸಾವಿರ ರೂ. ಜಪ್ತಿ ಮಾಡಲಾಗಿದೆ.
ಆರೋಪಿಗಳು ತಮ್ಮ ಹುಂಡೈ ಅಸೆಂಟ್ ಕಾರಿಗೆ ಮಾನವ ಹಕ್ಕುಗಳ ಆಯೋಗದ ಬೋರ್ಡ್ ಅಳವಡಿಸಿಕೊಂಡು ನಗರಾದ್ಯಂತ ಸುತ್ತಾಡಿ ಕೆಲ ಅಂಗಡಿಗಳಿಗೆ ತೆರಳಿ ನಿಮ್ಮ ಅಂಗಡಿಯಲ್ಲಿ ಗ್ಯಾಸ್ ಹಾಗೂ ಇನ್ನಿತರ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದರು.
ಇವರ ಹಾವ ಭಾವ, ಕಾರನ್ನು ನೋಡಿ ಬಹುತೇಕ ಜನರು ಮಾನವ ಹಕ್ಕುಗಳ ಆಯೋಗದ ಸಿಬ್ಬಂದಿಯೇ ಇರಬಹುದು ಎಂದು ನಂಬಿ ಹಣ ಕೊಡುತ್ತಿದ್ದರು.
ಬಂಧಿತರ ಪೈಕಿ ಕೆಲ ಆರೋಪಿಗಳ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೂ ಕೆಲ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.