ಇಲಾಖೆಯ ಮಾಹಿತಿಗಳ ಪ್ರಕಾರ, 2023-24ರ ಅಕ್ಟೋಬರ್ 31ರ ಒಳಗೆ ಸಲ್ಲಿಕೆಯಾಗಿರುವ ಐಟಿಆರ್ 7.65 ಕೋಟಿ. ಅಂದರೆ ಇದು 2022-23ರ ನವೆಂಬರ್ 7ರ ವರೆಗೆ ಸಲ್ಲಿಕೆಯಾಗಿದ್ದ 6.85 ಕೋಟಿಗಿಂತಲೂ ಹೆಚ್ಚಿನದಾಗಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.11.7ರಷ್ಟು ಹೆಚ್ಚಳವನ್ನು ದಾಖಲಿ ಸಿದೆ. ಇದಲ್ಲದೇ ಅಕ್ಟೋಬರ್ 31ರ ವರೆಗೆ ಸಲ್ಲಿಕೆಯಾಗಿರುವ ಐಟಿಆರ್‌ಗಳ ಪೈಕಿ 7.51 ಕೋಟಿಗೂ ಅಧಿಕ ಐಟಿಆರ್‌ಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಶೇ.96 ಐಟಿಆರ್‌ಗಳು ಪರಿಶೀಲನೆ ಗೊಳಪಟ್ಟು ಪ್ರಕ್ರಿಯೆ ಗೊಂಡಿವೆ.
Advertisement